ಉಡುಪಿ: ಈ ಬಾರಿ ಸಾಮಾಜಿಕ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ನಿಂದಲೇ ಕೋವಿಡ್ ರೂಲ್ಸ್ ಉಲ್ಲಂಘನೆಯಾಗಿದೆ.
ಕೋವಿಡ್ ರೂಲ್ಸ್ ಇದ್ದರೂ ಲಯನ್ಸ್ ಕ್ಲಬ್‌ನಿಂದ ಉಡುಪಿಯಲ್ಲಿ ಭರ್ಜರಿ ಪದಗ್ರಹಣ ಕಾರ್ಯಕ್ರಮ ನಡೆದಿದೆ.
ಉಡುಪಿ ನಗರದ ಅಮೃತ್ ಗಾರ್ಡನ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಮಾಸ್ಕ್,, ಸಾಮಾಜಿಕ ಅಂತರ ಮರೆತೇ ವೇದಿಕೆಯಲ್ಲಿ,ಮತ್ತು ಸಭಿಕರ ಸಾಲಲ್ಲಿ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ಮೂಲಕ ಕೊರೋನಾ ರೂಲ್ಸ್ ಗೆ ಎಳ್ಳುನೀರು ಬಿಟ್ಟಿದ್ದಾರೆ.ಇದಲ್ಲದೆ
ಲಯನ್ಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಅಂದ ಮೇಲೆ ಲಯನ್ಸ್‌ಗೆ ಅವಕಾಶ ಸಿಕ್ಕಿದ್ದು ಹೇಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಸಾಮಾಜಿಕ ಸೇವಾ ಸಂಸ್ಥೆಗಳೇ ಈ ರೀತಿ ನಿಯಮ ಗಾಳಿಗೆ ತೂರಿದರೆ ಹೇಗೆ.?ಉಡುಪಿಯಲ್ಲಿ ಜನಸಾಮಾನ್ಯರಿಗೆ ಮಾತ್ರನಾ ಕೊರೊನಾ ನಿಯಮಗಳು?ಜಿಲ್ಲಾಡಳಿತದ ಕೋವಿಡ್ ನಿಯಮಾವಳಿ ಬರೀ ದ್ವಿಚಕ್ರ ವಾಹನ ಸವಾರರಿಗೆ ಮಾತ್ರವೇ? ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವವಾಗಿದೆ.
Kshetra Samachara
21/08/2021 09:50 pm