ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಬೀದಿ ಪಾಲಾಗಿದ್ದ ಮಾನಸಿಕ ಅಸ್ವಸ್ಥೆ , ಎಮ್.ಕಾಂ ಪದವೀಧರೆಯ ರಕ್ಷಣೆ: ಮುಂದೇನು?

ಕಾರ್ಕಳ: ಕಾರ್ಕಳ ನಗರದಲ್ಲಿ ಕೌಟುಂಬಿಕ ಕಲಹದಿಂದ ಮಾನಸಿಕ ಅಸ್ವಸ್ಥಳಾದ ಮಹಿಳೆಯೊಬ್ಬರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲ್ಪಾಡಿ, ಕಾರ್ಕಳ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಯಶೋಧ ಶೆಟ್ಟಿ, ಕಾರ್ಕಳ ಸಾಂತ್ವನ ಕೇಂದ್ರ ಹಾಗೂ ಉಡುಪಿಯ ಸಖಿ ಸೆಂಟರಿನ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ವಿವಾಹಿತ ಮಹಿಳೆ ಭದ್ರಾವತಿ ಮೂಲದ ಗುಣವತಿ(35) ಎಂ.ಕಾಂ ಪದವೀಧರೆಯಾಗಿದ್ದು ಕೌಟುಂಬಿಕ ಕಲಹದಿಂದ ಮನನೊಂದು ಮಾನಸಿಕ ಅಸ್ವಸ್ಥಳಾಗಿ ಬೀದಿಪಾಲಾಗಿದ್ದರು. ಅದೆಷ್ಟೋ ದಿನಗಳಿಂದ ಸ್ನಾನ ಕೂಡ ಮಾಡದೆ ಕೊಳಕು ಬಟ್ಟೆಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದ ಒಕ್ಕೂಟದ ಅಧ್ಯಕ್ಷೆ ಹಾಗೂ ಸಾಂತ್ವನ ಕೇಂದ್ರದವರು ಮಹಿಳೆಗೆ ನೆಲೆ ಹಾಗೂ ಚಿಕಿತ್ಸೆ ಕೊಡಿಸಲು ಅಸಹಾಯಕರಾದರು. ವಿಶು ಶೆಟ್ಟಿಯವರ ಗಮನಕ್ಕೆ ಈ ವಿಷಯ ತಂದಾಗ ಕೂಡಲೇ ಸ್ಪಂದಿಸಿದ ವಿಶು ಶೆಟ್ಟಿ ತನ್ನ ವಾಹನದಲ್ಲಿ ಕಾರ್ಕಳಕ್ಕೆ ತೆರಳಿ ಅಸ್ವಸ್ಥ ಮಹಿಳೆಯನ್ನು ಸಖಿ ಸೆಂಟರಿನ ಸಮಾಲೋಚಕಿ ನೀತಾ ಹಾಗೂ ಕಾರ್ಕಳ ಸಾಂತ್ವನ ಕೇಂದ್ರದ ಸಮಾಲೋಚಕಿ ಸಂಗೀತ ಹೆಗ್ಡೆ ಸಹಾಯದಿಂದ ವಶಕ್ಕೆ ಪಡೆದು ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಣಾ ಸಮಯದಲ್ಲಿ ಸ್ಥಳೀಯ ನ್ಯಾಯವಾದಿ ಸುರೇಶ್ ಪೂಜಾರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಜಯಲಕ್ಷ್ಮಿ ನಾಯಕ್ ಸಹಕರಿಸಿದರು. ಸಂಬಂಧಪಟ್ಟವರು ಯಾರಾದರೂ ಇದ್ದಲ್ಲಿ ಸಖಿ ಸೆಂಟರ್ ಅಥವಾ ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.

Edited By : Somashekar
Kshetra Samachara

Kshetra Samachara

27/05/2022 05:07 pm

Cinque Terre

17.92 K

Cinque Terre

1

ಸಂಬಂಧಿತ ಸುದ್ದಿ