ಕುಂದಾಪುರ: ಇದೀಗ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ನಡುವೆ ಸಂಬಂಧವೇ ಇಲ್ಲದಂತಾಗಿದೆ! ರಾಜ್ಯದಾದ್ಯಂತ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಇ ದ್ದರೂ ಕುಂದಾಪುರ ತಾಲೂಕಿನಲ್ಲಿ ನಡಿತಾ ಇದೆ ಕ್ಲಾಸ್ ಗಳು. ತಾಲೂಕು ಶಿಕ್ಷಣಾಧಿಕಾರಿ ಸ್ಪೆಶಲ್ ಅನುಮತಿಯ ಮೇರೆಗೆ ಶಾಲೆಯಲ್ಲಿ ಪಾಠ ಮಾಡಲಾಗುತ್ತಿದೆ.
ಸರಕಾರದ ಸ್ಪಷ್ಟ ಆದೇಶ ಇದುವರೆಗೆ ಬಾರದ್ದರೂ ಕೂಡ ಕ್ಲಾಸ್ ಆರಂಭವಾಗಿದೆ ಹಾಗೂ ಕುಂದಾಪುರ ತಾಲೂಕು ವ್ಯಾಪ್ತಿಯ ಬಹುತೇಕ ಶಾಲೆಗಳಲ್ಲಿ ಶಾಲೆ ಓಪನ್ ಮಾಡಲಾಗಿದೆ.
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಕೊರೊನಾ ಮುನ್ನೆಚ್ಚರಿಕೆ ಮರೆತು ಶಾಲೆಯಲ್ಲಿ ಕ್ಲಾಸ್ ಮಾಡಲಾಗುತ್ತಿದೆ. ಕುಂದಾಪುರ ತಾಲೂಕಿನ ಗುಡ್ಡಟ್ಟು ಲಿಟ್ಲ್ ಸ್ಟಾರ್ ಕಾಲೇಜಿನಲ್ಲಿ ಹತ್ತನೇ ತರಗತಿಯವರಿಗೆ ಸ್ಪೆಶಲ್ ಕ್ಲಾಸ್ ಮಾಡುತ್ತಿದ್ದಾರೆ ಶಿಕ್ಷಕರು.
ಪೋಷಕರ ಒತ್ತಾಯ ನಡುವೆ ಬಿಇಓ ಸ್ಪೇಶಲ್ ಅನುಮತಿ ಪಡೆದು ಶಾಲೆಯಲ್ಲಿ ತರಗತಿ ಸಬೂಬು. ಹಾಗಾದ್ರೆ , ಜಿಲ್ಲೆಯ ಆರೋಗ್ಯ ಇಲಾಖೆ ಕಣ್ಣು ಮುಚ್ಚಿ ಕೂತಿದ್ಯಾ ಅನ್ನೋದೆ ಪ್ರಶ್ನೆಯಾಗಿದೆ! ಶಾಲೆ ತೆರೆಯದಂತೆ ತಜ್ಞರ, ಪೋಷಕರ ಬೇಡಿಕೆಯನ್ನು ಶಿಕ್ಷಣ ಇಲಾಖೆ ಮರೆತಿದ್ಯಾ?.
Kshetra Samachara
09/10/2020 09:46 pm