ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ವೀಕೆಂಡ್ ಕರ್ಫ್ಯೂ ಭಾಗಶಃ ಯಶಸ್ವಿ; ವಾಹನ ಸಂಚಾರ ಎಂದಿನಂತೆ

ವಿಟ್ಲ: ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದ ವಾರಾಂತ್ಯ ಕರ್ಫ್ಯೂ ವಿಟ್ಲದಲ್ಲಿ ಬಹುತೇಕ ಯಶಸ್ವಿಯಾಗಿದ್ದು, ಜನ ಮತ್ತು ವಾಹನ ಸಂಚಾರ ಎಂದಿನಂತಿದೆ.

ವಿಟ್ಲ ಪೇಟೆಯಲ್ಲಿ ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿಗಳ ಮಾಲೀಕರು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. 11 ಗಂಟೆ ಬಳಿಕ ಪೊಲೀಸರು ಪೇಟೆಗೆ ಧಾವಿಸಿ, ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದರು. ಬಸ್, ಕಾರು, ಆಟೋರಿಕ್ಷಾ ಮತ್ತು ಇನ್ನಿತರ ಖಾಸಗಿ ವಾಹನಗಳ ಸಂಚಾರ ಎಂದಿನಂತಿದೆ.

ತರಕಾರಿ, ಹಾಲು, ದಿನಸಿ, ಮೆಡಿಕಲ್ ಅಂಗಡಿ ತೆರೆದಿದ್ದು, ಹೆಚ್ಚಿನ ಗ್ರಾಹಕರು ಬಂದು ವಸ್ತು ಖರೀದಿಸಿದರು.ಪೊಲೀಸರು ಪೇಟೆಯಿಂದ ನಿರ್ಗಮಿಸಿದ ಬಳಿಕ ಬೆರಳೆಣಿಯಷ್ಟು ಅಂಗಡಿಗಳು ಅರ್ಧ ಬಾಗಿಲು ಹಾಕಿದ್ದು, ಇನ್ನೂ ಕೆಲವರು ಸಂಪೂರ್ಣವಾಗಿ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂತು.

Edited By : Manjunath H D
Kshetra Samachara

Kshetra Samachara

08/01/2022 02:17 pm

Cinque Terre

25.64 K

Cinque Terre

1