ಮಂಗಳೂರು: ಸರ್ಕಾರದ ವೀಕೆಂಡ್ ಕರ್ಫ್ಯೂ ಪಾಲನೆಗಾಗಿ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೀವಿ. ಬೆಳಿಗ್ಗೆ 6 ರಿಂದ ಕಾರ್ಯಾಚರಣೆ ಮಾಡುತ್ತಿದ್ದು, ನಿಯಮ ಉಲ್ಲಂಘಿಸಿದ ಅಂಗಡಿಗಳನ್ನು ಬಂದ್ ಮಾಡಲಾಗಿದೆ ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದರು.
ಪಾಲಿಕೆ ಅಧಿಕಾರಿಗಳ ಜೊತೆ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. 9 ಗಂಟೆವರೆಗೆ ನಾವು ಯಾವ ವಾಹನವನ್ನೂ ಸೀಝ್ ಮಾಡಿರಲಿಲ್ಲ. ಆದರೆ 9ರ ನಂತರ ಅನಗತ್ಯವಾಗಿ ಓಡಾಡಿದ 25 ವಾಹನಗಳನ್ನು ಸೀಝ್ ಮಾಡಿದ್ದೇವೆ. ಮಂಗಳೂರಲ್ಲಿ ಶೇ. 99ರಷ್ಟು ಜನ ಸ್ಪಂದಿಸುತ್ತಿದ್ದಾರೆ. ಈ ವೀಕೆಂಡ್ ಕರ್ಫ್ಯೂ ಮುಂಚೆ ಇದ್ದಂತಹ ರೀತಿಯಲ್ಲಿಲ್ಲ. ಸರ್ಕಾರದಿಂದಲೇ ಕೆಲ ಸಡಿಲಿಕೆ ಇದೆ. ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಸಿಟಿ ಪೊಲೀಸ್ ನ ಎಲ್ಲ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದಾರೆ ಎಂದರು.
Kshetra Samachara
08/01/2022 11:41 am