ಮಲ್ಪೆ: ಕೊರೋನಾ ಹತೋಟಿಗೆ ತರಲು ಉಡುಪಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಕೊರೋನಾ ಆತಂಕದ ಜೊತೆಗೆ ಕಟ್ಟುನಿಟ್ಟಿನ ನಿಯಮ ಇದ್ದರೂ ಹೊರಜಿಲ್ಲೆ, ಹೊರರಾಜ್ಯದ ಪ್ರವಾಸಿಗರು ಕ್ಯಾರೇ ಅನ್ನುತ್ತಿಲ್ಲ. ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಅವಕಾಶ ಇಲ್ಲ ಎಂದು ಖಡಕ್ ಸೂಚನೆ ಇದ್ದರೂ ನೂರಾರು ಪ್ರವಾಸಿಗರು ಇವತ್ತು ಮಲ್ಪೆ ಬೀಚ್ ನತ್ತ ಬಂದ ಪ್ರಸಂಗ ನಡೆಯಿತು.
ಹೀಗೆ ಬಂದ ಪ್ರವಾಸಿಗರು, ಮಲ್ಪೆ ಬೀಚ್ ನಿಂದ ಕೊಂಚ ದೂರದಲ್ಲಿ ಅಪಾಯಕಾರಿ ಎನಿಸುವ ಕಡಲತೀರದಲ್ಲಿ ನೀರಿಗೆ ಇಳಿದಿದ್ದಾರೆ. ವಿಷಯ ತಿಳಿದು ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮುದ್ರಕ್ಕಿಳಿದ ಪ್ರವಾಸಿಗರನ್ನು ವಾಪಸ್ ಕಳುಹಿಸಿದರು.
ವಾರಾಂತ್ಯದಲ್ಲಿ ಬೀಚ್ ಆಸುಪಾಸಿನಲ್ಲಿ ಮೀನುಗಾರಿಕಾ ರಸ್ತೆಯಲ್ಲಿ ಜನ ಜಮಾಯಿಸಬಾರದು ಎಂದು ಹೈವೇ ಪೆಟ್ರೋಲ್ ಪೊಲೀಸರು ಹೆಚ್ಚುವರಿ ಗಸ್ತು ತಿರುಗುತ್ತಿದ್ದಾರೆ. ಆದರೂ ಸಮುದ್ರದ ಸೌಂದರ್ಯ ಕಣ್ತುಂಬಿಸಿಕೊಳ್ಳಲು ಪ್ರವಾಸಿಗರು ಬರುವುದು ನಿಂತಿಲ್ಲ.ಇವತ್ತು ಬೀಚ್ ಗೆ ಬಂದ ಪ್ರವಾಸಿಗರನ್ನು ಪೊಲೀಸರು ಮನವೊಲಿಸಿ ವಾಪಾಸ್ ಕಳುಹಿಸಿದ ಘಟನೆ ನಡೆಯಿತು.
Kshetra Samachara
05/09/2021 07:37 pm