ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವೀಕೆಂಡ್ ಕರ್ಫ್ಯೂಗೆ ವ್ಯಾಪಾರಸ್ಥರ ವಿರೋಧ, ಕರ್ಫ್ಯೂ ಮುಂದುವರಿಸದಂತೆ ಮನವಿ

ಮಂಗಳೂರು: ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಲು ದ.ಕ ಜಿಲ್ಲಾಡಳಿತ ವಾರಾಂತ್ಯ ವೀಕೆಂಡ್ ಕರ್ಫ್ಯೂ ಮುಂದುವರಿಸಿದೆ.ಅದರೆ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಫ್ಯಾನ್ಸಿ,ಜವಳಿ,ಪಾದರಕ್ಷೆ ಅಂಗಡಿಗಳ ವ್ಯಾಪಾರಸ್ಥರು ಸೇರಿದಂತೆ ಇತರರು ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ.ದ.ಕ ಜಿಲ್ಲೆಯ ಪುತ್ತೂರು ನಗರದ ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಪೇಟೆಗಳಲ್ಲಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದಿಟ್ಟು ಕೊರೋನಾ ಮಾರ್ಗಸೂಚಿ ಉಲ್ಲಂಘಿಸಲು ಸರ್ವ ವರ್ತಕರ ಸಂಘ ಮುಂದಾಗಿತ್ತು.

ಅದರೆ ಇದೀಗ ಸ್ಥಳೀಯ ಜಿಲ್ಲಾಡಳಿತದ ಮನವಿ ಮೇರೆಗೆ ಒಂದು ವಾರದ ಮಟ್ಟಿಗೆ ತನ್ನ ನಿಲುವನ್ನು ಮುಂದೂಡಿಕೆ ಮಾಡಿದೆ.ಮಂಗಳೂರು ನಗರದಲ್ಲೂ ಕೂಡಾ ಇದೆ ರೀತಿಯ ವಿರೋಧ ವ್ಯಕ್ತವಾಗಿದ್ದು ಸರಕಾರದ ವಿರುದ್ಧ ವರ್ತಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಶನಿವಾರ ಹಾಗೂ ಭಾನುವಾರದ ವೀಕೆಂಡ್ ಕರ್ಫ್ಯೂ ನಿಂದ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಾಧ್ಯನಾ ಎಂಬ ಪ್ರಶ್ನೆ ಹಾಕ್ತಿದ್ದಾರೆ.ಅಲ್ಲದೆ ವೀಕೆಂಡ್ ಕರ್ಫ್ಯೂ ಮುಂದುವರಿಸದಂತೆ ಸರಕಾರವನ್ನು ಮನವಿ ಮಾಡಿಕೊಂಡಿದ್ದಾರೆ...

Edited By : Nagesh Gaonkar
Kshetra Samachara

Kshetra Samachara

03/09/2021 07:21 pm

Cinque Terre

40.4 K

Cinque Terre

10

ಸಂಬಂಧಿತ ಸುದ್ದಿ