ಮುಲ್ಕಿ: ಜಿಲ್ಲಾಡಳಿತದ ನಿರ್ದೇಶನದಂತೆ ಭಾನುವಾರ ಮುಲ್ಕಿ ತಾಲೂಕಿನಲ್ಲಿ ಭಾನುವಾರ ಕೊರೊನಾ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ.ಕೊರೊನಾ ವೀಕೆಂಡ್ ಕರ್ಫ್ಯೂ ನಡುವೆ ಭಾನುವಾರ ಮುಲ್ಕಿ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ಕೆಲಕಡೆ ಅಲ್ಪಸ್ವಲ್ಪ ಹಾನಿ ಸಂಭವಿಸಿದೆ. ಭಾರಿ ಮಳೆಗೆ ಕಕ್ವ ಕೊಕ್ರಾಣಿ ಬಳಿ ವಿದ್ಯುತ್ ತಂತಿಗೆ ತೆಂಗಿನ ಮರ ಬಿದ್ದು ಕೆಲವೊತ್ತು ವಿದ್ಯುತ್ ಅಸ್ತವ್ಯಸ್ತಗೊಂಡಿದೆ.
ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಬಳಿ ರಸ್ತೆಗೆ ಮರ ಬಿದ್ದು ಕೆಲಹೊತ್ತು ಸಂಜೆ ವಾಹನ ಸಂಚಾರ ವ್ಯತ್ಯಯವಾಯಿತು
ಕೊರೊನಾ ವೀಕೆಂಡ್ ಕರ್ಫ್ಯೂ ನಲ್ಲಿ ಹೆದ್ದಾರಿಯಲ್ಲಿ ತಡೆರಹಿತ ಖಾಸಗಿ, ಸರಕಾರಿ ಬಸ್ಸು,ಆಟೋ ಗಳ ಸಂಚಾರ ಎಂದಿನಂತೆ ಇತ್ತು. ಸದಾ ಜನನಿಬಿಡ ಪ್ರದೇಶವಾದ ತಾಲೂಕಿನ ಕಾರ್ನಾಡು ಪ್ರದೇಶದಲ್ಲಿ ಮೆಡಿಕಲ್ ಅಂಗಡಿಗಳು ಸಹಿತ ಎಲ್ಲಾ ಮುಚ್ಚಲ್ಪಟ್ಟಿತ್ತು ಬಿಕೋ ಎನ್ನುತ್ತಿತ್ತು. ಉಳಿದಂತೆ ತಾಲೂಕಿನ ಹಳೆಯಂಗಡಿ, ಪಕ್ಷಿಕೆರೆ, ಅತಿಕಾರಿಬೆಟ್ಟು ಬಳಕುಂಜೆ ಪಡುಪಣಂಬೂರು ಪ್ರದೇಶಗಳಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ.
ಭಾನುವಾರ ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ 1,ಐಕಳ ಗ್ರಾಪಂ ವ್ಯಾಪ್ತಿಯ ಉಳೆಪಾಡಿಯಲ್ಲಿ 2 ಸೇರಿದಂತೆ ಒಟ್ಟು 3 ಪೊಸಿಟಿವ್ ಪ್ರಕರಣ ದಾಖಲಾಗಿದೆ.
Kshetra Samachara
29/08/2021 06:53 pm