ಕಾಪು: "10 ಗಂಟೆಯೊಳಗೆ ವ್ಯಾಪಾರ ಮುಗಿಸಿ ಬಿಡಿ, ಇರಲಿ ಸಹಕಾರ"

ಕಾಪು: ಕೊರೊನಾ ಪ್ರಕರಣ ಕಾಪು ತಾಲೂಕಿನಲ್ಲಿ ಕಡಿಮೆ ಆಗುವ ಲಕ್ಷಣ ಕಾಣಿಸುತ್ತಿದ್ದು, 50ಕ್ಕಿಂತ ಅಧಿಕ ಪ್ರಕರಣಗಳಿರುವ ಗ್ರಾಮಗಳನ್ನು ಸೀಲ್ ಡೌನ್ ಮಾಡಿ ಕೋವಿಡ್ ನಿಯಂತ್ರಿಸುವಲ್ಲಿ ಈಗಾಗಲೇ ಯಶಸ್ಸು ಕಂಡಿದೆ.

ತಾಲೂಕಿನಾದ್ಯಂತ ಬೆಳಗ್ಗೆ 10 ಗಂಟೆವರೆಗೆ ಬಿರುಸಿನ‌ ವ್ಯಾಪಾರ ನಡೆದಿದ್ದು, ದಿನಸಿ, ತರಕಾರಿ, ಹಣ್ಣು, ಹಾಲು ಸಹಿತ ಇತರ ಅಗತ್ಯ ವಸ್ತು ಖರೀದಿಗಾಗಿ ಜನ ಬೆಳಗ್ಗಿನಿಂದಲೇ ಪೇಟೆಯಲ್ಲಿ ಸಂಚರಿಸುತ್ತಿದ್ದರು.

ಈ ನಡುವೆ ಕೋವಿಡ್ ನಿಯಮಾವಳಿ ಪಾಲಿಸದ ವಾಹನ ಸವಾರರಿಗೆ, ಅಂಗಡಿ ಮಾಲೀಕರಿಗೆ ತಹಸೀಲ್ದಾರ್ ಪ್ರತಿಭಾ ಆರ್. ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆ 10 ಗಂಟೆ ಒಳಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವಂತೆ ಪೊಲೀಸರೂ ಆಗಾಗ ಎಚ್ಚರಿಸುತ್ತಿದ್ದರು.

Kshetra Samachara

Kshetra Samachara

14 days ago

Cinque Terre

11.83 K

Cinque Terre

0