ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವತಿಯಿಂದ ಮುಲ್ಕಿ ಬಸ್ ನಿಲ್ದಾಣದ ಬಳಿ ರಿಕ್ಷಾ ಚಾಲಕರಿಗೆ ಕೊರೊನಾ ಜಾಗೃತಿ ಮೂಡಿಸಲಾಯಿತು.
ಮುಲ್ಕಿ ಠಾಣೆ ನೂತನ ಎಸ್ಐ ವಿನಾಯಕ ತೋರಗಲ್ ಮಾತನಾಡಿ, ಕೊರೊನಾ ಬಗ್ಗೆ ರಿಕ್ಷಾ ಚಾಲಕರು ಮತ್ತಷ್ಟು ಜಾಗ್ರತೆ ವಹಿಸಬೇಕು ಹಾಗೂ ಕೊರೊನಾ ನಿಯಮ ಪಾಲಿಸಬೇಕು. ಪ್ರಯಾಣಿಕರಲ್ಲಿ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಮುಂಜಾಗ್ರತೆ ಮೂಲಕ ವ್ಯವಹರಿಸಬೇಕು. ಕೊರೊನಾ ಬಗ್ಗೆ ಸರಕಾರದ ನೀತಿ ನಿಯಮ ಪಾಲಿಸಿ, ಎಲ್ಲರೂ ಕೊರೊನಾ ಹೊಡೆದೋಡಿಸಲು ಪ್ರತಿಜ್ಞೆ ಮಾಡೋಣ ಎಂದರು. ಬಳಿಕ ಪೊಲೀಸರಿಂದ ಪ್ರತಿ ರಿಕ್ಷಾ ಚಾಲಕರ ಬಳಿ ತೆರಳಿ ಕೊರೊನಾ ನಿಯಮ ಪಾಲಿಸುವಂತೆ ವಿನಂತಿಸಲಾಯಿತು.
Kshetra Samachara
15/10/2020 06:45 pm