ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಶಂಕರಪುರದ ಅಜ್ಜಿಯ "ಬಾಣಂತಿ‌ಮದ್ದು" ದುಬೈಯಲ್ಲೂ ಫೇಮಸ್ !

ವಿಶೇಷ ವರದಿ: ರಹೀಂ ಉಜಿರೆ

ಕಾಪು: ಅನೇಕ ನಾಟಿ ವೈದ್ಯರನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಉಡುಪಿ ಜಿಲ್ಲೆಯದ್ದು. ಅದರಲ್ಲಿಯೂ ತೆರೆಮರೆಯಲ್ಲಿ ಮನೆಮದ್ದುಗಳನ್ನು ಮಾಡಿಕೊಡುತ್ತಿರುವ ಅನೇಕ ವ್ಯಕ್ತಿಗಳಲ್ಲಿ ಎಲಿಝಾ ಡಿಮೆಲ್ಲೊ ಕೂಡ ಒಬ್ಬರು. ಇವರ ಬಾಣಂತಿ ಮದ್ದುಗಳು ವಿದೇಶಗಳಲ್ಲೂ ಬಹಳ ಫೇಮಸ್ .

ಎಲಿಝಾ ಅವರಿಗೆ ಈಗ ಎಪ್ಪತ್ತು ವರ್ಷ.ಉಡುಪಿ ಜಿಲ್ಲೆಯ ಶಂಕರಪುರ ಎಂಬ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ‌.ಇವರು ಕೃಷಿಕರೂ ಹೌದು.ತಮ್ಮ ತೋಟದಲ್ಲಿ ಹಲವು ಬಗೆಯ ಔಷಧೀಯ ಗಿಡಗಳಿವೆ.ಎರಡು ದಶಕಗಳ ಹಿಂದೆ ಇವರು ತಮ್ಮ ಮನೆಯ ಸದಸ್ಯರಿಗಾಗಿ ಮನೆ‌ಮದ್ದು ಮಾಡಲು ಪ್ರಾರಂಭಿಸಿದರಂತೆ. ಕ್ರಮೇಣ ಇದು ಊರವರಿಗೆ ಗೊತ್ತಾಗಿ ,ಹೊರ ಜಿಲ್ಲೆ ಮತ್ತು ವಿದೇಶಗಳಿಗೂ ಇವರ ಮದ್ದು ಪಾರ್ಸಲ್ ಹೋಗಿದೆ.ಅದರಲ್ಲೂ ಇವರ ಬಾಣಂತಿ ಮದ್ದು ತುಂಬ ಪ್ರಸಿದ್ಧ. ಐದು ಬಗೆಯ ಬಾಣಂತಿ‌ಮದ್ದು ಜಿಲ್ಲೆ ದಾಟಿ ದುಬೈ ಮತ್ತು ಸೌದಿಗೂ ಹೋಗಿದೆ. ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿರುವ ಈ ಅಜ್ಜಿ ಅತ್ಯಂತ ಶ್ರದ್ಧೆ ಮತ್ತು ಕಾಳಜಿ ವಹಿಸಿ ಬಾಣಂತಿ ಮದ್ದು ತಯಾರಿಸುತ್ತಾರೆ.ಮನೆಗೆ ಬಂದವರಿಗೆ ಪ್ರೀತಿಯಿಂದ ಮದ್ದು ಕೊಡುತ್ತಾರೆ.ಇವರ ಮನೆಗೆ ಒಮ್ಮೆ ಬಂದವರು ಮತ್ತೆ ಬಾರದೆ ಇರಲಾರರು.ಅಂಥ ಕೈ ಗುಣ ಇವರದ್ದು.

ಅಮೆರಿಕಾ, ದುಬೈ, ಮಸ್ಕತ್, ಮುಂಬೈ, ಬೆಂಗಳೂರು ಮುಂತಾದ ಕಡೆಗಳಿಂದ ಜನರು ಊರಿಗೆ ಬಂದಾಗ ಇವರ ಮನೆಯಿಂದ ಬಾಣಂತಿ ಮದ್ದು ತೆಗೆದುಕೊಂಡು ಹೋಗುತ್ತಾರೆ.ಇವರು ಶುದ್ಧ ಗ್ರಾಮೀಣ ಶೈಲಿಯಲ್ಲಿ ಕಟ್ಟಿಗೆ ಒಲೆಯಲ್ಲಿ ಮದ್ದು ತಯಾರು ಮಾಡುತ್ತಾರೆ. ಔಷಧಿಗೆ ಬೇಕಾಗುವ ಎಲ್ಲ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಿ ತಯಾರು ಮಾಡುವುದಲ್ಲದೇ ಉತ್ತಮ ರುಚಿ ಕೂಡ ಹೊಂದಿದೆ .ಸ್ಥಳೀಯ ವೈದ್ಯರೇ ಇವರ ಕೈಗುಣವನ್ನು ಹೊಗಳುತ್ತಾರೆ.

ಗ್ರಾಮೀಣ ಪ್ರದೇಶದ ಮನೆ ಮದ್ದು ಉಳಿಸುವಲ್ಲಿ ಈ ಅಜ್ಜಿಯ ಕೊಡುಗೆ ಅಪಾರ. ಇವರ ಕೈಯಲ್ಲಿ ತಯಾರಾದ ಮದ್ದು ಪಡೆದ ಸಾವಿರಾರು ಜನ ಅದರ ಪ್ರಯೋಜನ ಪಡೆದಿದ್ದಾರೆ. ಈ ಅಜ್ಜಿಯ ಜನಸೇವೆ ಬೆಲೆ ಕಟ್ಟಲಾಗದ್ದು, ಅಲ್ಲವೇ?

ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

Edited By : Somashekar
Kshetra Samachara

Kshetra Samachara

21/09/2022 03:35 pm

Cinque Terre

6.91 K

Cinque Terre

2

ಸಂಬಂಧಿತ ಸುದ್ದಿ