ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ಹಲವು ಸೇವಾಕಾರ್ಯಗಳು ನಡೆಯುತ್ತಿವೆ. ಹಲವೆಡೆ ರಕ್ತದಾನ ಶಿಬಿರಗಳು ನಡೆದವು. ಬಿಜೆಪಿ ಪಕ್ಷದ ವತಿಯಿಂದಲೂ ಬೇರೆ ಬೇರೆ ಸೇವೆಗಳು ನಡೆಯುತ್ತಿವೆ. ಈ ಮಧ್ಯೆ ಬಿಜೆಪಿ ನಾಯಕಿಯೊಬ್ಬರು ಮರಣೋತ್ತರ ದೇಹದಾನಕ್ಕೆ ಸಹಿ ಹಾಕಿದ್ದಾರೆ. ಹಿರಿಯಡ್ಕ ಮಹಾ ಶಕ್ತಿ ಕೇಂದ್ರ ಪ್ರಧಾನ ಕಾಯದರ್ಶಿ ಶಿಲ್ಪಾ ಸಾಲಿಯಾನ್ ದೇಹದಾನ ಒಡಂಬಡಿಕೆಗೆ ಸಹಿ ಹಾಕಿದವರು.
ಇವರು ಪ್ರಧಾನಿ ಹುಟ್ಟುಹಬ್ಬದ ಸಂದರ್ಭ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ದೇಹದಾನ ಪತ್ರಕ್ಕೆ ಸಹಿ ಹಾಕುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ದೇಹದ ಒಂದೊಂದೇ ಅಂಗಾಂಗಗಳನ್ನು ಜನರು ದಾನ ಮಾಡುತ್ತಾರೆ. ಆದರೆ ಮೋದೀಜಿ ಮೇಲಿನ ಅಭಿಮಾನದಿಂದ ತಾವು ದೇಹದಾನ ಮಾಡುವ ನಿರ್ಧಾರಕ್ಕೆ ಬಂದಿದ್ದು ತಮ್ಮ ಈ ತೀರ್ಮಾನ ಕುಟುಂಬದವರಿಗೂ ಖುಷಿ ನೀಡಿರುವುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.
PublicNext
17/09/2022 09:17 pm