ಕುಂದಾಪುರ: ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಮಗುವೊಂದು ಮೃತಪಟ್ಟ ದಾರುಣ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದ ಉದುರು ಎಂಬಲ್ಲಿನಡೆದಿದೆ.
ಮೃತ ಮಗುವನ್ನು ಉಪ್ಪುಂದ ಗ್ರಾಮದ ಶೇಖರ ಖಾರ್ವಿ ಹಾಗೂ ಶೈಲಾ ದಂಪತಿಯ ನಾಲ್ಕು ತಿಂಗಳ ಹೆಣ್ಣುಮಗು ಸಾನ್ವಿತಾ ಎಂದು ಗುರುತಿಸಲಾಗಿದೆ. ಶೈಲಾ ಹೆರಿಗೆಯಾಗಿ ತಾಯಿ ಮನೆಯಾದ ಉದುರುವಿನಲ್ಲಿ ವಾಸವಾಗಿದ್ದು, ಆ.27ರಂದು ರಾತ್ರಿ ಮಗು ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬೈಂದೂರು ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿಯೇ ಸಾನ್ವಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/08/2022 08:09 pm