ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಕೃತಕ ಕಾಲು ಪಡೆದ ವ್ಯಕ್ತಿ ಮಕ್ಕಳಂತೆ ರೋಮಾಂಚನಗೊಂಡು ಕುಣಿದ ಕ್ಷಣ !

ಮಣಿಪಾಲ: ಕೃತಕ ಕಾಲು ಪಡೆದುಕೊಂಡ ವ್ಯಕ್ತಿಯೊಬ್ಬರು ಸಂಭ್ರಮದಿಂದ ಮಕ್ಕಳಂತೆ ಕುಣಿಯುತ್ತಿರುವ ವೀಡಿಯೋ ಇದು.ರೋಟರಿ ಕ್ಲಬ್ ಮಣಿಪಾಲ, ಪೇಜಾವರ ಅಧೋಕ್ಷಜ ಮಠ ಹಾಗೂ ಭಗವಾನ್ ಮಹಾವೀರ ವಿಕಲಾಂಗ ಸಹಾಯತಾ ಸಮಿತಿ ಸಹಯೋಗದಲ್ಲಿ ಉಚಿತ ಜೈಪುರ ಕೃತಕ ಕಾಲು ಜೋಡಣಾ ಶಿಬಿರ ನಡೆದಿತ್ತು.

ನಾಲ್ಕು ದಿನ ಸುಮಾರು 300 ಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.ಈ ಶಿಬಿರದಲ್ಲಿ ಎರಡೂ ಕೃತಕ ಕಾಲು ಪಡೆದ ವ್ಯಕ್ತಿಯೊಬ್ಬರು ಸಂತಸದಿಂದ ಸಂಭ್ರಮಿಸಿದ ಕ್ಷಣದ ವೀಡಿಯೋ ವೈರಲ್ ಆಗುತ್ತಿದೆ. ಈ ವಯೋವೃದ್ಧರ ಜೊತೆ ಶಿಬಿರದ ಆಯೋಜಕರೂ ಸೇರಿ ಕುಣಿದು ಸಂಭ್ರಮಪಟ್ಟರು. ಸದ್ಯ ಈ ಕೃತಕ ಕಾಲು ಪಡೆದ ವ್ಯಕ್ತಿ ಸಂಭ್ರಮದಿಂದ ಕುಣಿಯುವ ವೀಡಿಯೋ ವೈರಲ್ ಆಗಿದ್ದು ಜನರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Edited By : Shivu K
PublicNext

PublicNext

18/04/2022 11:37 am

Cinque Terre

60.13 K

Cinque Terre

7

ಸಂಬಂಧಿತ ಸುದ್ದಿ