ವರದಿ: ರಹೀಂ ಉಜಿರೆ
ಉಡುಪಿ: ಭಾರತೀಯ ಮೂಲದ ಯೋಗ ವಿದೇಶಗಳಲ್ಲೂ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ.ಅದರಲ್ಲೂ ವಿಶ್ವ ಯೋಗದಿನ ಪ್ರಾರಂಭವಾದ ನಂತರ ಅಂತರಾಷ್ಟ್ರೀಯ ಮಟ್ಡದಲ್ಲಿ ಜನರು ಯೋಗದ ಮೊರೆ ಹೋಗುತ್ತಿದ್ದಾರೆ. ನೀವು ನಂಬಲಿಕ್ಕಿಲ್ಲ ,ಮುಸ್ಲಿಂ ದೇಶ ,ಕುವೈಟ್ ನಲ್ಲೂ ಯೋಗ ಕ್ರೇಝ್ ಹೆಚ್ಚುತ್ತಿದ್ದು ಉಡುಪಿಯ ಯೋಗ ಟೀಚರ್ ಅರಬ್ಬರಿಗೆ ನಮ್ಮ ಯೋಗದ ಎಬಿಸಿಡಿ ಹೇಳಿಕೊಡುತ್ತಿದ್ದಾರೆ.
ಉಡುಪಿಯ ಅಲಕಾ ಜಿತೇಂದ್ರ ಯೋಗದಲ್ಲಿ ಹೆಚ್ಚಿನ ತರಬೇತಿ ಪಡೆದು ಕುವೈಟ್ ನಲ್ಲಿ ವಾಸವಾಗಿದ್ದಾರೆ.ಕಳೆದ ಮೂರು ವರ್ಷಗಳಿಂದ ಮುಸ್ಲಿಂ ದೇಶ ಕುವೈಟ್ ನಲ್ಲಿ ಅಲ್ಲಿಯ ಆಸಕ್ತರಿಗೆ ಯೋಗಾಭ್ಯಾಸ ಹೇಳಿಕೊಡುತ್ತಿದ್ದಾರೆ.ಕಳೆದ ಮೂರು ವರ್ಷಗಳಿಂದ ಅಲ್ಲಿರುವ ಕನ್ನಡಿಗರಷ್ಟೇ ಅಲ್ಲದೇ ,ಅರಬ್ ಪ್ರಜೆಗಳೂ ಯೋಗದಲ್ಲಿ ಸಾಕಷ್ಟು ಆಸಕ್ತಿ ವಹಿಸುತ್ತಿದ್ದಾರೆ ಅಂತಾರೆ ಅಲಕಾ.
ಸದ್ಯ ಮೈಸೂರಿನಲ್ಲಿ ಅಷ್ಠಾಂಗ ವಿನ್ಯಾಸ ಯೋಗ ತರಬೇತಿಗಾಗಿ ಅವರು ಊರಿಗೆ ಬಂದಿದ್ದಾರೆ.ಹಠಯೋಗಕ್ಕಿಂತ ಭಿನ್ನವಾದ ಈ ಅಷ್ಠಾಂಗ ಯೋಗದಲ್ಲಿ ತಿಂಗಳ ಕಾಲ ತರಬೇತಿ ಪಡೆದು ಕುವೈಟ್ ನಲ್ಲಿ ಹೇಳಿಕೊಡುವುದು ಅವರ ಉದ್ದೇಶ. ವಿದೇಶಗಳಲ್ಲಿ ಈ ಪ್ರಕಾರಕ್ಕೆ ಅತಿ ಹೆಚ್ಚಿನ ಬೇಡಿಕೆ ಇದೆ ಅಂತಾರೆ ಅಲಕಾ ಜಿತೇಂದ್ರ. ಇವರು ಉಡುಪಿಯ ಪ್ರಸಿದ್ಧ ನಟಿ ,ಗಾಯಕಿ ಮಾನಸಿ ಸುಧೀರ್ ಅವರ ಸಹೋದರಿ.
PublicNext
29/07/2022 08:23 pm