ಮುಲ್ಕಿ: ನಿರಾಶ್ರಿತರಿಗೆ ಯುವ ಕಾಂಗ್ರೆಸ್ ನಿಂದ ಊಟ ವಿತರಣೆ

ಮುಲ್ಕಿ: ಮುಲ್ಕಿ ಯುವ ಕಾಂಗ್ರೆಸ್ ವತಿಯಿಂದ ಜನತಾ ಕರ್ಫ್ಯೂ 4ನೇ ದಿನ ನಿರಾಶ್ರಿತರಿಗೆ ಮಧ್ಯಾಹ್ನದ ಊಟ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.

ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ನಿರಾಶ್ರಿತರ- ನಿರ್ಗತಿಕರ ಕಣ್ಣೊರೆಸುವ ಕೆಲಸ ಮಾಡುತ್ತಿರುವ ಮುಲ್ಕಿ ಯುವ ಕಾಂಗ್ರೆಸ್ ನ ಕಾರ್ಯವೈಖರಿ ಶ್ಲಾಘಿಸಿದರು.

ಮುಲ್ಕಿ ನಪಂ ಸದಸ್ಯರಾದ ಪುತ್ತುಬಾವ, ಬಾಲಚಂದ್ರ ಕಾಮತ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಹಳೆಯಂಗಡಿ ಗ್ರಾಪಂ ಸದಸ್ಯರಾದ ಧನರಾಜ್ ಸಸಿಹಿತ್ಲು, ಸತೀಶ್ ಕೋಟ್ಯಾನ್,ಇಂಟಕ್ ಮುಲ್ಕಿ-ಮೂಡಬಿದ್ರೆ ಕ್ಷೇತ್ರಾಧ್ಯಕ್ಷ ಮೋಹನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kshetra Samachara

Kshetra Samachara

6 days ago

Cinque Terre

13.08 K

Cinque Terre

0