ಉಡುಪಿ: ಜಿಲ್ಲೆಯಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಮುಖ್ಯವಾಗಿ ಬೈಂದೂರಿನ ಜಡ್ಕಲ್ ನಲ್ಲಿ ಡೆಂಘಿ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ಗ್ರಾಮದ ಶಾಲೆಗಳಿಗೆ ಹತ್ತು ದಿನ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ತನಕ 152 ಡೆಂಘಿ ಪ್ರಕರಣ ಖಚಿತಗೊಂಡಿದೆ. ಈವರೆಗೆ 2000 ಕ್ಕೂ ಅಧಿಕ ಶಂಕಿತ ಪ್ರಕರಣಗಳು ದಾಖಲಾಗಿವೆ. ಮುದೂರು ಪರಿಸರದಲ್ಲಿ 105, ಜಡ್ಕಲ್ ನಲ್ಲಿ 6 ಪ್ರಕರಣಗಳು ಖಚಿತಗೊಂಡಿದ್ದು, ಕೊಲ್ಲೂರಿನಲ್ಲಿ 2 ಪ್ರಕರಣ ಕಂಡುಬಂದಿದೆ. ಉಡುಪಿ ಜಿಲ್ಲೆಯ ಇತರೆಡೆಗಳಲ್ಲಿ 39 ಪ್ರಕರಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತಗಳು ಸ್ವಚ್ಛತೆಗೆ ಗಮನ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿವೆ.
PublicNext
19/05/2022 05:11 pm