ಮಂಗಳೂರು: ದೇವರ ನಾಡು ಕೇರಳದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಭೀತಿಯ ಮಧ್ಯೆ ನಿಫಾ ವೈರಸ್ನ ಕಂಟಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ರಾಜ್ಯವಾದ ಕರ್ನಾಟಕಕ್ಕೂ ಆತಂಕ ಶುರುವಾಗಿದೆ.
ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಆರೋಗ್ಯ ಇಲಾಖೆಯು ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಜಿಲ್ಲಾಡಳಿತವು ಜಿಲ್ಲೆಯ 19 ಗ್ರಾಮಗಳ 31 ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಿದೆ.
ಈ ಸಂಬಂಧ ಚಿಕಿತ್ಸೆಗಾಗಿ ಜಿಲ್ಲೆಯ ಆಸ್ಪತ್ರೆಗೆ ಬರುವ ರೋಗಿಗಗಳ ಮೇಲೆ ನಿಗಾವಹಿಸಬೇಕು. ಕೇರಳದಿಂದ ಜಿಲ್ಲೆಗೆ ಆಗಮಿಸುವವ ಮೇಲೂ ನಿಗಾವಹಿಸಬೇಕು. ಜೊತೆಗೆ ನಿಫಾ ವೈರಸ್ ಲಕ್ಷಣಗಳಿರೋ ಬಗ್ಗೆ ಸ್ಕ್ರೀನಿಂಗ್ ಮಾಡಲು ಜಿಲ್ಲೆಯ ಎಲ್ಲಾ 8 ಮೆಡಿಕಲ್ ಕಾಲೇಜುಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
Kshetra Samachara
08/09/2021 03:23 pm