ಉಡುಪಿ: ಉಡುಪಿಯಲ್ಲಿ ಹಿರಿಯ ನಾಗರೀಕರಿಗೆ ಕೊರೋನಾ ಲಸಿಕೆ ಆರಂಭಗೊಂಡಿತು.ಮೊದಲ ದಿನವಾದ ಇಂದು
ಮೂರು ಗಂಟೆ ವಿಳಂಬವಾಗಿ ಅಭಿಯಾನ ಆರಂಭಗೊಂಡಿದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ವ್ಯಾಕ್ಸಿನೇಶನ್ ಗೆ ಚಾಲನೆ ನೀಡಲಾಗಿದ್ದು ಹಿರಿಯ ನಾಗರಿಕ ಎ.ಆರ್ ಚಂದ್ರಪ್ಪ ಎಂಬವರಿಗೆ ಮೊದಲ ಲಸಿಕೆ ಇಂದು ನೀಡಲಾಯಿತು.
ಕೋವಿನ್ 2.0 App ತಾಂತ್ರಿಕ ದೋಷದಿಂದ ವ್ಯಾಕ್ಸಿನೇಶನ್ ವಿಳಂಬಗೊಂಡಿದ್ದರಿಂದ ಸರತಿ ಸಾಲಿನಲ್ಲಿ ಹಿರಿಯ ನಾಗರೀಕರು ಕಾಯಬೇಕಾಯಿತು.
ಇಂದು ಉಡುಪಿ ಜಿಲ್ಲೆಯ ಆರು ಕೇಂದ್ರಗಳಲ್ಲಿ ಹಿರಿಯ ನಾಗರೀಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ.
Kshetra Samachara
01/03/2021 05:07 pm