ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೋವಿಡ್ ನಿಯಮ ಉಲ್ಲಂಘನೆ: 20 ಲಕ್ಷಕ್ಕೂ ಅಧಿಕ ದಂಡ

ಉಡುಪಿ: ಜಿಲ್ಲೆಯ ಸಾರ್ವಜನಿಕ ಕೋವಿಡ್ ನಿಯಮ ಪಾಲಿಸದವರಿಂದ ದಂಡ ವಸೂಲಿ ಮಾಡಲಾಗಿದೆ, ಗುರುವಾರ ಒಂದೇ ದಿನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಾಗೂ ಮಾಸ್ಕ್ ಧರಿಸದೇ ಓಡಾಟ ಸೇರಿದಂತೆ ಒಟ್ಟು 57 ಪ್ರಕರಣಗಳು ದಾಖಲಾಗಿವೆ. ಇದರಿಂದ 5,700ರೂ. ದಂಡ ಸಂಗ್ರಹಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 18,823 ಪ್ರಕರಣಗಳು ದಾಖಲಾಗಿದ್ದು, 20,40,900ರೂ. ದಂಡ ವಸೂಲಾಗಿದೆ.

ಆರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುರುವಾರ 6 (600ರೂ.) ಸಹಿತ ಈ ತನಕ ಒಟ್ಟು 2,767 (2,77,850ರೂ.) ಪ್ರಕರಣ ದಾಖಲಾಗಿವೆ. ಏಳು ತಾಲೂಕು ವ್ಯಾಪ್ತಿಯ 155 ಗ್ರಾ. ಪಂ. ವ್ಯಾಪ್ತಿಯಲ್ಲಿ ಗುರುವಾರ 15 (1,500ರೂ.) ಸಹಿತ ಈ ತನಕ ಒಟ್ಟು 3,671ಪ್ರಕರಣ (3,69,500ರೂ.) ದಾಖಲಾಗಿದೆ.

ಅಬಕಾರಿ ಇಲಾಖೆಯು ಗುರುವಾರ 9 (900ರೂ.) ಸಹಿತ ಈ ತನಕ ಒಟ್ಟು 585 (58,500ರೂ.) ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದೆ. ಕಂದಾಯ ಇಲಾಖೆಯಡಿ ಗುರುವಾರ 2 (200ರೂ.) ಸಹಿತ ಈ ತನಕ ಒಟ್ಟು 643 (64,800ರೂ.) ಪ್ರಕರಣ ದಾಖಲಾಗಿದೆ.

ಪೊಲೀಸ್‌ ಇಲಾಖೆಯು ಗುರುವಾರ 25 (2,500ರೂ.) ಸಹಿತ ಈವರೆಗೆ 11,047 (12,59,250ರೂ.) ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಿದೆ. ಮೀನುಗಾರಿಕೆ ಇಲಾಖೆ: 51 ಪ್ರಕರಣ(5,100ರೂ.), ಪ್ರವಾಸೋದ್ಯಮ ಇಲಾಖೆ: 51 (5,100ರೂ.), ಸಾರಿಗೆ ಇಲಾಖೆಯಡಿ 8 ಪ್ರಕರಣದಲ್ಲಿ 800ರೂ. ದಂಡ ವಸೂಲಿ ಮಾಡಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

01/01/2021 05:15 pm

Cinque Terre

15.1 K

Cinque Terre

3

ಸಂಬಂಧಿತ ಸುದ್ದಿ