ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೋವಿಡ್ ಹೊಸ ಮಾರ್ಗಸೂಚಿ ಬಂದಿಲ್ಲ: ಜಿಲ್ಲಾಧಿಕಾರಿ

ಉಡುಪಿ: ಕೋವಿಡ್ ನಾಲ್ಕನೇ ಅಲೆ ಕಾಲಿಡುತ್ತಿದೆ ಎಂಬ ಆತಂಕದಲ್ಲಿ ಜನರಿದ್ದಾರೆ. ಈ ಸಂಬಂಧ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಉಡುಪಿ ಡಿಸಿ, ಬೂಸ್ಟರ್ ಡೋಸ್ ಬಗ್ಗೆ ನಾವು ಹೆಚ್ಚು ಗಮನ ಕೇಂದ್ರೀಕರಣ ಮಾಡುತ್ತಿದ್ದೇವೆ. ಲಸಿಕಾಕರಣ ಬಹಳ ಮುಖ್ಯ. 60 ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮುಂಜಾಗ್ರತಾ ಡೋಸ್ ಪೂರ್ಣಗೊಳಿಸಲು ಮತ್ತು ಮಕ್ಕಳ ಲಸಿಕಾಕರಣ ಪೂರ್ಣಗೊಳಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಜಿಲ್ಲಾಧಿಕಾರಿ, ಈಗಾಗಲೇ ಕೆಲವು ನಿರ್ಬಂಧಗಳು ತೆರವಾಗಿವೆ. ಆದರೆ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧಾರಣೆ ಈಗಲೂ ಚಾಲ್ತಿಯಲ್ಲಿದೆ. ಸರಕಾರದಿಂದ ಈವರೆಗೂ ಹೊಸ ಮಾರ್ಗಸೂಚಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

Edited By : Manjunath H D
Kshetra Samachara

Kshetra Samachara

26/04/2022 10:39 pm

Cinque Terre

13.11 K

Cinque Terre

0

ಸಂಬಂಧಿತ ಸುದ್ದಿ