ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಹೆಚ್ಚಿದ ವೈರಲ್ ಜ್ವರ- ಶಾಲೆಗೆ ರಜೆ

ಮುಲ್ಕಿ: ಕಿನ್ನಿಗೋಳಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ವೈರಲ್ ಜ್ವರ ಹಾಗೂ ಇಲಿ ಜ್ವರದ ಪ್ರಕರಣವು ಕಂಡು ಬಂದಿರುವ ಹಿನ್ನಲೆಯಲ್ಲಿ ಕಿನ್ನಿಗೋಳಿ ರೋಟರಿ ಶಾಲೆಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.

ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ 60ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಂಡಿರುವುದರಿಂದ ಶಾಲೆಗೆ ರಜೆ ನೀಡಿದ್ದು, ಮುಂಜಾಗರೂತೆಯ ನಿಮಿತ್ತ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಿಂದ ಪಾಗಿಂಗ್ ಮಾಡಲಾಗಿದೆ. ಕಿನ್ನಿಗೋಳಿ ಸಮೀಪದ ಕಿಲೆಂಜೂರು ಯುವಕ ಹಾಗೂ ಕೆಂಚನಕೆರೆಯ ಗೃಹಿಣಿ ಓರ್ವರು ಇಲಿ ಜ್ವರದಿಂದ ಬಳಲುತ್ತಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

15/09/2022 08:45 pm

Cinque Terre

4.42 K

Cinque Terre

0

ಸಂಬಂಧಿತ ಸುದ್ದಿ