ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರೋನಾ ಮುಂಜಾಗರೂಕತೆ: ಪ್ರೌಢಶಾಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಶಿಬಿರ

ಬೈಂದೂರು :ಕಳೆದ ವರ್ಷ ಮಾರ್ಚ್ ನಿಂದ ಪ್ರಾರಂಭಗೊಂಡ ಕೋವಿಡ್ ಮಹಾಮಾರಿ ಆರ್ಭಟದ ಹಿನ್ನಲೆಯಲ್ಲಿ ಮತ್ತು ನಂತರದ ಲಾಕ್ ಡೌನ್ ನಿಂದಾಗಿ ಹಲವು ಮಕ್ಕಳ ವಿಧ್ಯಾಭ್ಯಾಸದ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಇದೇ ರೀತಿ ವ್ಯತಿರಿಕ್ತ ಪರಿಣಾಮ ಬೀರದಿರಲಿ ಮತ್ತು ಮಕ್ಕಳಿಗೆ ಶಾಲೆ ಪುನರಾರಂಭದ ಸಿದ್ಧತೆಗಾಗಿ ಉಡುಪಿ ಜಿಲ್ಲೆಯ ಬೈಂದೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು.ಅನೇಕ ಮಕ್ಕಳ ವೈದ್ಯಕೀಯ ತಪಾಸಣೆ ಇಲ್ಲಿನ ಕಾಲೇಜಿನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ ಶೆಟ್ಟಿ, ವೈದ್ಯರಾದ ಡಾ.ನಂದಿನಿ, ಡಾ.ಗೌತಮ್ , ಉಪಪ್ರಾಂಶುಪಾಲರಾದ ಪದ್ಮನಾಭ, ಸಹಶಿಕ್ಷಕರಾದ ರವೀಂದ್ರ, ದೈಹಿಕ ಶಿಕ್ಷಕ ಪ್ರಭಾಕರ್ ಮತ್ತಿತ್ತರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

29/07/2021 04:13 pm

Cinque Terre

20.85 K

Cinque Terre

0

ಸಂಬಂಧಿತ ಸುದ್ದಿ