ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆದುಳು ಜ್ವರದ ವೈರಸ್‍ಗೆ ಸಾಮೂಹಿಕವಾಗಿ ಬಲಿಯಾಗುತ್ತಿರುವ ನಾಯಿಗಳು

ಸುಳ್ಯ : ಮಹಾಮಾರಿ ಕೊರೋನಾ ವೈರಸ್‍ಗೆ ಇಡೀ ಮಾನವ ಸಂಕುಲವೇ ನಡುಗುತ್ತಿದ್ದರೆ ಇತ್ತ ನಾಯಿಗಳು ಮೆದುಳು ಜ್ವರದ ವೈರಸ್‍ಗೆ ಸಾಮೂಹಿಕವಾಗಿ ಬಲಿಯಾಗುತ್ತಿವೆ.

ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಒಂದು ನಾಯಿಂದ ಮತ್ತೊಂದು ನಾಯಿಗೆ ವೈರಸ್ ಮೂಲಕ ಇದು ಹರಡುತ್ತಿದೆ.ಇದೀಗ ಇದು ಬೀದಿ ನಾಯಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದು ಬೀದಿ ನಾಯಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ಬಲಿಯಾಗುತ್ತಿವೆ. ಇದರ ಪರಿಣಾಮ ಇದೀಗ ಸಾಕು ನಾಯಿಗಳು ಈ ರೋಗಕ್ಕೆ ಬಲಿಯಾಗುವ ಭೀತಿ ಮಾಲಿಕರಿಗೆ ಆವರಿಸಿದೆ.

ರೋಗ ಪೀಡಿತ ನಾಯಿ ವಿಪರೀತ ಜ್ವರದ ಪರಿಣಾಮ ತಲೆ ಎತ್ತುವುದಿಲ್ಲ. ಕವುಚಿ ಮಲಗಿ ತನ್ನ ಎರಡು ಕೈಗಳ ಮಧ್ಯದಲ್ಲಿ ತಲೆಯನ್ನಿಟ್ಟು ನರಳಾಡುತ್ತಾ ಮಲಗುತ್ತವೆ. ದಿನದಿಂದ ದಿನಕ್ಕೆ ಆಹಾರ ಸೇವನೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ ಮತ್ತು ಕ್ಷೀಣವಾಗುತ್ತವೆ.ಕೆಲವೊಂದು

ನಾಯಿಗಳಿಗೆ ವಾಂತಿ ಭೇದಿ ಪ್ರಾರಂಭವಾಗುತ್ತದೆ. ಮತ್ತೆ ಕೆಲವುಗಳಿಗೆ ನರ ದೌರ್ಬಲ್ಯ, ಕಣ್ಣಿನ ಪೊರೆ ಸಮಸ್ಯೆ ಕಾಡುವುದು ಈ ರೋಗದ ಮೂರು ಲಕ್ಷಣಗಳಾಗಿವೆ. ಎದ್ದು ಓಡಾಡಲು ಅಸಾಧ್ಯವಾದ ರೀತಿಯಲ್ಲಿ ಕ್ಷೀಣವಾಗುತ್ತವೆ.

ರೋಗ ಪೀಡಿತ ನಾಯಿ ಆರಂಭದ ದಿನಗಳಲ್ಲಿ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತದೆ. ಬಳಿಕದ ಕೆಲವು ದಿನಗಳು ನೀರನ್ನು ಮಾತ್ರ ಸೇವಿಸುತ್ತದೆ, ಬಳಿಕ ಆಹಾರವನ್ನು ಸೇವಿಸುವುದನ್ನೇ ನಿಲ್ಲಿಸುತ್ತದೆ.

ರೋಗ ಹರಡುವ ರೀತಿ ಇದೋಂದು ವೈರಸ್ ರೋಗವಾಗಿದ್ದು ಮೂರು ತಿಂಗಳ ಮೊದಲೇ ನಾಯಿಗಳು ಈ ರೋಗಕ್ಕೆ ತುತ್ತಾದರೂ ಆರಂಭದಲ್ಲಿ ಯಾವುದೇ ಲಕ್ಷಣ ಕಾಣುವುದಿಲ್ಲ. ಕೊನೆಯ ಹತ್ತರಿಂದ ಹದಿನೈದು ದಿನಗಳಲ್ಲಿ ಈ ರೋಗ ಉಲ್ಭಣಿಸಿ ನಾಯಿಗಳು ಸಾವನ್ನಪ್ಪುತ್ತವೆ. ವೈರಸ್‍ಗೆ ತುತ್ತಾದ ನಾಯಿಗಳು ರೇಬಿಸ್

ರೋಗ ಪೀಡಿತ ನಾಯಿಯಂತೆ ವರ್ತಿಸುತ್ತಿದ್ದು ಸಾಕು ನಾಯಿಗಳ ಮೇಲೆ ದಾಳಿಯನ್ನು ಮಾಡುತ್ತವೆ. ಈ ಮೂಲಕವು ಈ ರೋಗ ಹರಡುತ್ತದೆ. ಇದರ ಪರಿಣಾಮ ಸಾಕು ನಾಯಿ

ಮಾಲಿಕರನ್ನು ಆತಂಕಕ್ಕೀಡು ಮಾಡುತ್ತಿದೆ. ಕೆಲವೊಂದು ನಾಯಿಗಳಿಗೆ ಜ್ವರ ಹೆಚ್ಚಾಗಿ ಹುಚ್ಚು ನಾಯಿಯಂತೆ ಓಡುತ್ತವೆ. ಮೂಗಿನಿಂದ ಕೀವು ಬರಲು ಆರಂಭವಾಗುತ್ತದೆ. ಮತ್ತು

ಬಾಯಿಯಿಂದಲೂ ಕೀವು ಮಿಶ್ರಿತ ನೀರು ನಾಯಿ ಸಂಚರಿಸಿದ ಉದ್ದಕ್ಕೂ ಬೀಳುವುದರ ಪರಿಣಾಮ ಒಂದು ನಾಯಿಯಿಂದ ಮತ್ತೋಂದು ನಾಯಿಗೆ ಸುಲಭವಾಗಿ ಹರಡುತ್ತದೆ.

ಈ ರೋಗದಿಂದ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ.ವರ್ಷದ ಯಾವ ಸಮಯದಲ್ಲಿಯೂ ಈ ರೋಗ ನಾಯಿಗಳಿಗೆ ಬರಬಹುದು. ಬೇಸಿಗೆ ಕಾಲದಲ್ಲಿ ಈ ರೋಗ ಹೆಚ್ಚಾಗಿ ಉಲ್ಬಣಿಸುತ್ತದೆ.

ಆಂಟಿ ಬಯೋಟಿಕ್ ಚಿಕಿತ್ಸೆಯ ಮೂಲಕ ಈ ರೋಗ ಬಾರದಂತೆ ಕ್ರಮಕೈಗೊಳ್ಳ ಬಹುದು. ವಾಂತಿ ಭೇದಿ ಆರಂಭವಾದ ನಾಯಿಗಳು ಬೇಗನೆ ಸಾವನ್ನಪ್ಪುತ್ತವೆ. ನರ ದೌರ್ಬಲ್ಯದ ಲಕ್ಷಣದ ರೋಗಕ್ಕೆ ತುತ್ತಾದ ನಾಯಿಯನ್ನು ರೋಗ ಪ್ರಾರಂಭವಾದ ಆರಂಭ ದಿನಗಳಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ರಕ್ಷಿಸ ಬಹುದಾಗಿದೆ.

ರೋಗ ಬಾರದಂತೆ ಆರಂಭದಲ್ಲಿ 60 ದಿನಗಳ ಮರಿಗಳಿಗೆ ಡಿಸ್ಟೆಂಪರ್ ವ್ಯಾಕ್ಸೀನ್ ನೀಡಬೇಕಾಗುತ್ತದೆ, ಬಳಿಕ 90 ದಿನಗಳ ಬಳಿಕ ಚುಚ್ಚು ಮದ್ದು ನೀಡಿ ನಂತರ ಪ್ರತೀ ವರ್ಷಕ್ಕೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡುವುದರ ಮೂಲಕ ಈ ರೋಗದಿಂದ ನಾಯಿಗಳನ್ನು ರಕ್ಷಿಸಬಹುದು ಎಂದು ಪುತ್ತೂರು ಪಶು ವೈಧ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ಧೇಶಕ ಧರ್ಮಪಾಲ್ ಪ್ರತಿಕ್ರಿಯಿಸಿದರು.

Edited By :
Kshetra Samachara

Kshetra Samachara

28/09/2020 04:07 pm

Cinque Terre

18.05 K

Cinque Terre

1