ಮೂಡುಬಿದಿರೆ: ಮೂಡುಬಿದರೆಯ ಎಸ್ಎನ್ಎಮ್ ಪಾಲಿಟೆಕ್ನಿಕ್‌ನ ರಾಷ್ಟೀಯ ಸೇವಾ ಯೋಜನೆ ಹಾಗು ಯುವ ರೆಡ್ ಕ್ರಾಸ್ ಘಟಕ, ಮೂಡುಬಿದಿರೆ ಭಾರತೀಯ ರೆಡ್ ಕ್ರಾಸ್ ಘಟಕ ಇವರ ಸಹಕಾರದಿಂದ ಶುಕ್ರವಾರ ನಡೆದ ರಕ್ತದಾನ ಶಿಬಿರದಲ್ಲಿ 186 ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಭಾರತೀಯ ರೆಡ್ ಕ್ರಾಸ್ ಘಟಕ ರಕ್ತ ನಿಧಿ ಮಂಗಳೂರು ಇವರು ರಕ್ತದಾನ ಶಿಬಿರವನ್ನು ನೆರವೇರಿಸಿದರು.
ಎಸ್ಎನ್ಎಮ್ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2015ರಿಂದ ಇದುವರೆಗೂ ಸತತವಾಗಿ 9 ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದು, ಒಟ್ಟು 1381 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.
Kshetra Samachara
27/05/2022 10:51 pm