ಕುಂದಾಪುರ: ಭಂಡಾರಿ ಯುವ ವೇದಿಕೆ ಹಾಗೂ ಕೆಎಂಸಿ ಮಣಿಪಾಲದ ಸಹಯೋಗದಲ್ಲಿ ಕುಂದಾಪುರದ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾ„ಕಾರಿ ಡಾ| ನಾಗೇಶ್ ಮಾತನಾಡಿ, ಸಾರ್ವಜನಿಕ ಸೇವೆಯೇ ನಮ್ಮೆಲ್ಲರ ಧ್ಯೇಯವಾಗಿರಬೇಕು. ಇಂತಹ ಆರೋಗ್ಯ ಶಿಬಿರಗಳಿಂದ ಉತ್ತಮ ಆರೋಗ್ಯದ ಜತೆಗೆ ಕಾಳಜಿಯೂ ಮೂಡುತ್ತದೆ. ಅದು ಇಂದಿನ ಅವಶ್ಯಕ. ಜಗತ್ತು ಎಷ್ಟೇ ಮುಂದುವರಿದರೂ, ರಕ್ತಕ್ಕೆ ಸರಿಸಮಾನವಾದುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ರಕ್ತಕ್ಕೆ ರಕ್ತವೇ ದಾನ ನೀಡಬೇಕು. ಆದ್ದರಿಂದ ರಕ್ತದಾನ ಹೆಚ್ಚೆಚ್ಚು ನಡೆಯಬೇಕು. ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 3-4 ಬಾರಿ ರಕ್ತದಾನ ಮಾಡಬಹುದು ಎಂದು ಹೇಳಿದರು.
ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಅಂಕದಕಟ್ಟೆಯ ಸಹನಾ ಗ್ರೂಪ್ಸ್‍ನ ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ, ಬಾರ್ಕೂರು ಕಚ್ಚೂರಿನ ಶ್ರೀ ನಾಗೇಶ್ವರ ದೇವಸ್ಥಾನದ ಪ್ರ. ಕಾರ್ಯದರ್ಶಿ ಶ್ರೀಧರ ಭಂಡಾರಿ ಬಿರ್ತಿ ಮಾತನಾಡಿದರು.
ಕುಂದಾಪುರದ ಭಂಡಾರಿ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಆಸ್ಪತ್ರೆಯ ವೈಧ್ಯಾಧಿಕಾರಿ ಹಾಗೂ ಡಾ. ನಾಗೇಶ್ ಅವರನ್ನು ಈ ಸಂಧರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
Kshetra Samachara
27/12/2021 04:43 pm