ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಯಂ ರಕ್ತದಾನ ಮಾಡಿ ಸಿಬ್ಬಂದಿಗೆ ಸ್ಫೂರ್ತಿಯಾದ ಬಂಟ್ವಾಳ ತಹಸೀಲ್ದಾರ್

ಬಂಟ್ವಾಳ: ಕಂದಾಯ ಇಲಾಖೆ ಬಂಟ್ವಾಳ , ದೇರಳಕಟ್ಟೆ ಜ. ಕೆ.ಎಸ್.ಹೆಗ್ಡೆ ಆಸ್ಪತ್ರೆ, ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬಂಟ್ವಾಳ ತಾಲೂಕು ಕಂದಾಯ ಇಲಾಖೆ ಸಿಬ್ಬಂದಿಯಿಂದ ರಕ್ತದಾನ ಶಿಬಿರ ಬಂಟ್ವಾಳ ಮಿನಿವಿಧಾನ ಸೌಧದಲ್ಲಿ ನಡೆಯಿತು.

ತಹಸೀಲ್ದಾರ್ ರಶ್ಮಿ ಎಸ್.ಆರ್ . ಸ್ವಯಂ ರಕ್ತದಾನ ಮಾಡುವ ಮೂಲಕ ಇಲಾಖೆ ಸಿಬ್ಬಂದಿಗೆ ಸ್ಫೂರ್ತಿಯಾದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿ ಮಾತನಾಡಿ, ಗಾಂಧಿ ಜಯಂತಿಯಂದು ಬಂಟ್ವಾಳ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರಿಂದ ಮಾದರಿ ಕಾರ್ಯ ನಡೆದಿದ್ದು, ಇದು ಎಲ್ಲೆಡೆ ಅನುಕರಣೀಯ ಎಂದರು.

ತಹಸೀಲ್ದಾರ್ ರಶ್ಮಿ ಎಸ್.ಆರ್., ಬುಡಾ ಆಧ್ಯಕ್ಷ ಬಿ.ದೇವದಾಸ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಜ.ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ. ಶ್ರೀಲಕ್ಷ್ಮಿ, ಉಪತಹಸೀಲ್ದಾರ್ ಗಳಾದ ರಾಜೇಶ್ ನಾಯ್ಕ್, ರವಿಶಂಕರ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು ಉಪಸ್ಥಿತರಿದ್ದರು. ಈ ಸಂದರ್ಭ ಸ್ವಚ್ಛತಾ ಕಾರ್ಯವನ್ನೂ ಆಯೋಜಿಸಲಾಗಿತ್ತು. ಗ್ರಾಮ ಸಹಾಯಕರು, ಗ್ರಾಮಕರಣಿಕರು, ಕಚೇರಿ ಸಿಬ್ಬಂದಿ ಸಹಕರಿಸಿದರು.

Edited By : Nagesh Gaonkar
Kshetra Samachara

Kshetra Samachara

02/10/2020 04:25 pm

Cinque Terre

18.09 K

Cinque Terre

0

ಸಂಬಂಧಿತ ಸುದ್ದಿ