ಮುಲ್ಕಿ: ಗ್ರಾಮ- ಗ್ರಾಮಗಳಲ್ಲಿ ಪ್ರತಿ ನಾಗರಿಕರು ಸ್ವಚ್ಛತೆಯ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರೆ ಕೊರೊನಾ ದಂತಹ ರೋಗ ನಿರ್ಮೂಲನೆ ಜೊತೆಗೆ ಸುಂದರ ಗ್ರಾಮ ನಿರ್ಮಾಣ, ಜನರ ಆರೋಗ್ಯ ವೃದ್ಧಿಯೂ ಸಾಧ್ಯ ಎಂದು ತೋಕೂರು ಗಜಾನನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನವೀನ್ ಶೆಟ್ಟಿಗಾರ್ ಹೇಳಿದರು. ಅವರು ಇತಿಹಾಸ ಪ್ರಸಿದ್ಧ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ತೋಕೂರು ದೇವಳದ ಬಳಿಯ ರಸ್ತೆ ಇಕ್ಕೆಲವನ್ನು ತಮ್ಮ ಸಂಘದ ಸದಸ್ಯರೊಂದಿಗೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಪಂ ಕಾರ್ಯದರ್ಶಿ ಲೋಕನಾಥ ಭಂಡಾರಿ, ಮಾಜಿ ಅಧ್ಯಕ್ಷ ಮೋಹನದಾಸ್, ಸದಸ್ಯ ಹೇಮನಾಥ ಅಮೀನ್, ಹರಿಪ್ರಸಾದ್ ಕೊಲ್ನಾಡು ಮತ್ತಿತರರು ಭೇಟಿ ನೀಡಿ ಸದಸ್ಯರ ಸೇವಾ ಕೈಂಕರ್ಯ ಶ್ಲಾಘಿಸಿದರು.
Kshetra Samachara
08/12/2020 11:25 am