ಬೈಂದೂರು(ಉಡುಪಿ ಜಿಲ್ಲೆ): ಸರ್ಕಾರಿ ಆಸ್ಪತ್ರೆಗೆ ತಡವಾಗಿ ಯಾಕೆ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿದ ಸ್ಥಳೀಯ ಪತ್ರಕರ್ತನನ್ನು ವೈದ್ಯಾಧಿಕಾರಿ ತಳ್ಳಾಡಿ ಎಳೆದಾಡಿದ್ದಾನೆ.
ಉಡುಪಿ ಜಿಲ್ಲೆ ಬೈಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅಪಘಾತಗೊಂಡ ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗಾಗಿ ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದ್ರೆ ತುರ್ತು ವೇಳೆಯಲ್ಲಿ ಆಸ್ಪತ್ರೆಯಲ್ಲಿರಬೇಕಿದ್ದ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರು ಸುಮಾರು 2 ಗಂಟೆ ತಡವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಇದನ್ನು ಪ್ರಶ್ನಿಸಿದ ಸ್ಥಳೀಯ ಪತ್ರಕರ್ತನನ್ನು ಡಾ. ಮಹೇಂದ್ರಕುಮಾರ್ ಶೆಟ್ಟಿ ತಳ್ಳಾಡಿದ್ದಾರೆ. ಇದರ ವಿಡಿಯೋ ಈ ಎಲ್ಲಡೆ ವೈರಲ್ ಆಗಿದೆ.
PublicNext
28/01/2022 05:32 pm