ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಸುಗೂಸು ಮಗುವೊಂದು ಬದಲಾಗಿದೆ ಎಂದು ಪೋಷಕರಿಂದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯ ಕೋಟೇಶ್ವರ ಕುಂದಾಪುರದ ಮುಸ್ತಫಾ ಹಾಗೂ ಅಮ್ರೀನ್ ದಂಪತಿಯೇ ಮಗು ಬದಲಾಗಿದೆ ಎಂದು ದೂರು ನೀಡಿದವರು. ಸೆ.28ರಂದು ಹೆರಿಗೆಗಾಗಿ ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೆರಿಗೆಯಾದಾಗ ಹೆಣ್ಣು ಮಗು ಎಂದು ಹೇಳಿದ್ದರು. ಆ ಬಳಿಕ ಮಗು ಅನಾರೋಗ್ಯವಾಗಿದೆ ಎಂದು ಹೇಳಿ ಐಸಿಯುನಲ್ಲಿ ಇರಿಸಲಾಗಿತ್ತು. ತಾಯಿಗೆ ಮಗು ನೀಡಿರಲಿಲ್ಲ. ಮಗುವನ್ನು ಎರಡು ಬಾರಿ ತಾಯಿ ನೋಡಲು ಹೋದ ಸಂದರ್ಭ ಹೆಣ್ಣು ಮಗುವೇ ಇತ್ತು.
ಆದರೆ ಮಗುವಿನ ಆರೋಗ್ಯ ಸಮಸ್ಯೆ ಉಲ್ಬಣಗೊಂಡಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸುದಾಗಿ ನಿರ್ಧರಿಸಿದ್ದರು. ಇದಕ್ಕೆ ಒಪ್ಪಿರುವ ವೈದ್ಯರು ಮಗುವನ್ನು ಬಟ್ಟೆಯಲ್ಲಿ ಸುತ್ತಿ ಆ್ಯಂಬುಲೆನ್ಸ್ ನಲ್ಲಿ ಬ್ರಹ್ಮಾವರ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಖಾಸಗಿ ಆಸ್ಪತ್ರೆಗೆ ಹೋದ ಬಳಿಕ ಮಗು ನೋಡಿದಾಗ ಗಂಡು ಮಗು ಪತ್ತೆಯಾಗಿದೆ. ಈ ಬಗ್ಗೆ ಪೋಷಕರು ಬಂದರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಹುಟ್ಟಿದ ಮಗು ಗಂಡಾಗಿದ್ದು, ದಾಖಲೆಯಲ್ಲೂ ಗಂಡು ಮಗುವೇ ಇತ್ತು. ಮುಂದೆ ಡಿಎನ್ಎ ಪರೀಕ್ಷೆ ಮಾಡಿಸಿ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.
Kshetra Samachara
15/10/2021 04:14 pm