ಬೈಂದೂರು: ಬೈಂದೂರು ತಾಲೂಕು ವ್ಯಾಪ್ತಿಯ ಶಿರೂರಿನಲ್ಲಿ ನಿನ್ನೆ ಆಂಬುಲೆನ್ಸ್ ನಿಯಂತ್ರಣ ತಪ್ಪಿ ಟೋಲ್ ಗೇಟ್ ಕಂಬಕ್ಕೆ ಬಡಿದಿತ್ತು.
ಈ ಘಟನೆಯಲ್ಲಿ ನಾಲ್ವರು ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯಿಂದ ಅತಿವೇಗದಿಂದ ಬಂದ ಆಂಬುಲೆನ್ಸ್, ಟೋಲ್ ಗೇಟ್ ಹತ್ತಿರ ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಭಾರಿ ಅವಘಡ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿ, ಚಾಲಕ ರೋಷನ್ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆಗೆ ಕಾರಣ ಏನು ? ಘಟನೆಗೂ ಮುನ್ನ ಏನಾಯ್ತು? ಚಾಲಕ ರೋಷನ್ ಮಾತಿನಲ್ಲೇ ಕೇಳಿ...
PublicNext
21/07/2022 01:17 pm