ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀಕೃಷ್ಣನ ದರ್ಶನ ಪಡೆದ ಪಂಚಭಾಷಾ ನಟಿ ಲಕ್ಷ್ಮೀ

ಉಡುಪಿ: ಪಂಚ ಭಾಷಾ ತಾರೆ ಜೂಲಿ ಲಕ್ಷ್ಮಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಖಾಸಗಿ ಕೆಲಸ ನಿಮಿತ್ತ ಉಡುಪಿಗೆ ಆಗಮಿಸಿದ್ದ ಅವರು ಪೊಡವಿಗೊಡೆಯನ ದರ್ಶನ ಪಡೆದು ಬಳಿಕ ಶ್ರೀಗಳ ಆಶೀರ್ವಾದ ಪಡೆದರು.ಬಳಿಕ ಅನೌಪಚಾರಿಕವಾಗಿ ಮಾತನಾಡಿದ ನಟಿ, ಅಡುಗೆ, ಸಂಸಾರ, ಸಿನಿಮಾ ಇವಿಷ್ಟೇ ನನ್ನ ಮುಂದಿರುವ ಯೋಜನೆ ಎಂದರು. ನನಗೆ ಇಷ್ಟದ ನಟಿ ನಾನೇ, ಇಷ್ಟದ ನಟ ನನ್ನೆಜಮಾನ್ರು ಎಂದು ನಸು ನಕ್ಕರು. ಹೊಸ ಸಿನಿಮಾ ಬರಲಿದೆ ಕಾದು ನೋಡಿ ಎಂದರು. ಜನರು ಈಗಲೂ ನನ್ನನ್ನು ಸ್ಮರಿಸುತ್ತಿದ್ದಾರೆಂದರೆ ಅದು ನಿಜಕ್ಕೂ ದೇವರ ಆಶೀರ್ವಾದ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

19/10/2021 01:22 pm

Cinque Terre

19.44 K

Cinque Terre

1

ಸಂಬಂಧಿತ ಸುದ್ದಿ