ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಜಿಲ್ಲೆ: ಕಳೆದೆರಡು ದಿನಗಳಲ್ಲಿ ಸೋಂಕಿತರ ಪೈಕಿ ಮಕ್ಕಳು,ವಿದ್ಯಾರ್ಥಿಗಳೇ ಹೆಚ್ಚು!

ಉಡುಪಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್‌ ಪಾಸಿಟಿವ್ ಬರುವವರ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳವಾಗಿದೆ. ಅದೇ ರೀತಿ ಸೋಂಕು ಪತ್ತೆಯಾಗುತ್ತಿರುವ ಪುಟಾಣಿ ಮಕ್ಕಳು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಬುಧವಾರ 683 ಮಂದಿ ಪಾಸಿಟಿವ್ ಬಂದಿದ್ದರೆ ಇವರಲ್ಲಿ 327 ಮಂದಿ 0-5 ಮಕ್ಕಳು ಹಾಗೂ 25ವರ್ಷದೊಳಗಿನ ವಿವಿಧ ವರ್ಗದ ವಿದ್ಯಾರ್ಥಿಗಳಿದ್ದಾರೆ.

ಅದೇ ರೀತಿ ನಿನ್ನೆ 767 ಮಂದಿ ಪಾಸಿಟಿವ್ ಬಂದಿದ್ದರೆ ಈ ಪೈಕಿ 476 ಮಂದಿ ಮಕ್ಕಳು ಹಾಗೂ ವಿದ್ಯಾರ್ಥಿಗಳು! ಪಾಸಿಟಿವ್ ಬಂದ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದ್ದಾರೆ.

Edited By :
Kshetra Samachara

Kshetra Samachara

21/01/2022 02:46 pm

Cinque Terre

11.34 K

Cinque Terre

0

ಸಂಬಂಧಿತ ಸುದ್ದಿ