ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ಗೆ ಸಚಿವ ಎಸ್.ಅಂಗಾರ ಚಾಲನೆ

ಮಂಗಳೂರು: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಇಂದು ನಗರದ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಬೂಸ್ಟರ್ ಡೋಸ್ ಗೆ ಚಾಲನೆ ನೀಡಿದರು.

ಬಳಿಕ ಸಚಿವ ಎಸ್.ಅಂಗಾರ ಮಾತನಾಡಿ, ದ.ಕ.ಜಿಲ್ಲೆಯಲ್ಲಿ 52,529 ಆರೋಗ್ಯ ಕಾರ್ಯಕರ್ತರು, 15,924 ಮುಂಚೂಣಿ ಕಾರ್ಯಕರ್ತರು, 2,69,000 ಮಂದಿಯಿದ್ದಾರೆ. ಇಂದು ಜಿಲ್ಲೆಯಲ್ಲಿ 40 ಸಾವಿರ ಮಂದಿಗೆ ಬೂಸ್ಟರ್ ಡೋಸ್ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮುನ್ನೆಚ್ಚರಿಕಾ ದೃಷ್ಟಿಯಿಂದ ಬೂಸ್ಟರ್ ಡೋಸ್ ಕೊಡಬೇಕೆಂದು ವಿನಂತಿಸಿದರು.

ವಾರಾಂತ್ಯ ಕರ್ಫ್ಯೂ ಬಗ್ಗೆ ಜನರಲ್ಲಿ ಅಸಮಾಧಾನ ಇರಬಹುದು. ಆದರೆ ಇದರಿಂದ ಜನರ ಓಡಾಟಕ್ಕೆ ಕಡಿವಾಣ ಹಾಕಲು ಸಾಧ್ಯ. ಸರಕಾರಕ್ಕೆ ಜನರ ಆರೋಗ್ಯ ಹಾಗೂ ಪ್ರಾಣ ರಕ್ಷಣೆಯ ಗುರಿಯಿದ್ದು, ಜನರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಆದ್ದರಿಂದ ಇಂತಹ ನಿಯಮಗಳಿಗೆ ಸರಕಾರ ಸ್ಪಂದನೆ ನೀಡಬೇಕು. ಜನತೆಯ ಸ್ಪಂದನೆಯಿದ್ದಲ್ಲಿ ವಾರಾಂತ್ಯ, ನೈಟ್ ಕರ್ಫ್ಯೂಗಳನ್ನು ಸರಕಾರ ಹಿಂಪಡೆಯುವ ಸಂದರ್ಭ ಬರಬಹುದು ಎಂದು ಅಂಗಾರ ಹೇಳಿದರು.

Edited By : Manjunath H D
Kshetra Samachara

Kshetra Samachara

10/01/2022 01:27 pm

Cinque Terre

8.53 K

Cinque Terre

0

ಸಂಬಂಧಿತ ಸುದ್ದಿ