ಮಂಗಳೂರು: ದ.ಕ.ಜಿಲ್ಲೆಯಲ್ಲಿ ಈ ವಾರ ವಾರಾಂತ್ಯ ಕರ್ಫ್ಯೂಗೆ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಮದುವೆ ಸಮಾರಂಭ, ಯಕ್ಷಗಾನ ಕಾರ್ಯಕ್ರಮಗಳಿಗೆ ಸರಕಾರದ ಮಾರ್ಗಸೂಚಿಯನ್ವಯ ಅವಕಾಶ ನೀಡಲಾಗುತ್ತದೆ. ಆದರೆ ಹೊರ ಆವರಣದಲ್ಲಿ 200 ಮಂದಿಗೆ ಹಾಗೂ ಒಳಾಂಗಣದಲ್ಲಿ 100 ಮಂದಿ ಜನ ಸೇರಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ತಮ್ಮ ಕಚೇರಿಯಲ್ಲಿಂದು ಮಾತನಾಡಿದ ಅವರು, ಮುಂದಿನ ವಾರದ ವಾರಾಂತ್ಯದ ಮದುವೆ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳಿಗೆ ಯಾವುದೇ ಅವಕಾಶ ಇರುವುದಿಲ್ಲ. ವಾರಾಂತ್ಯದಲ್ಲಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಆದರೆ ನಿತ್ಯದ ಸೇವೆಗಳು ಮಾಡಲು ಅವಕಾಶ ಇದೆ. ಭಾರೀ ಜನಸಂಖ್ಯೆ ಸೇರುವ ಕಂಬಳ, ಉರೂಸ್, ಧರ್ಮನೇಮ, ಬ್ರಹ್ಮಕಲಶ, ಚರ್ಚ್ ಗಳ ಸಮಾರಂಭಗಳನ್ನು ಮುಂದೂಡಲು ಡಿಸಿ ಮನವಿ ಮಾಡಿದರು.
ವಾರಾಂತ್ಯದಲ್ಲಿ ಅಂಗಡಿಗಳು ತೆರದಿದ್ದು, ನಾಗರಿಕರು ತಮ್ಮ ಮನೆಯ ಹತ್ತಿರದಲ್ಲಿ ಇರುವ ಅಂಗಡಿಗಳಿಗೆ ತೆರಳಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಅವಕಾಶವಿದೆ. ಶಾಲೆಗಳಿಗೆ ರಜೆಯಿದ್ದು, ಪರೀಕ್ಷೆ ಇರುವವರು ಹಾಲ್ ಟಿಕೆಟ್ ತೋರಿಸಿ ಹೋಗಬಹುದು. ನಿತ್ಯ ಓಡಾಟ ಮಾಡುವವರಿಗೆ ತೊಂದರೆ ಆಗುವ ಹಿನ್ನೆಲೆಯಲ್ಲಿ ಕೇರಳ ಬಾರ್ಡರ್ ಸದ್ಯಕ್ಕೆ ಮುಚ್ಚಲಾಗುತ್ತಿಲ್ಲ.ಆದರೆ ಗಡಿಯಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಿ ತಪಾಸಣೆ ಮಾಡಲಾಗುತ್ತದೆ ಎಂದು ಡಿಸಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
Kshetra Samachara
05/01/2022 09:53 pm