ಮಂಗಳೂರು: ಹೆಮ್ಮಾರಿ ಸೋಂಕಿಗೆ ಮದ್ದಾಗಿರುವ ಕೋವಿಡ್ ಲಸಿಕೆ ಅಭಿಯಾನ ಮುಂದುವರೆದಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಲೆಯ ಕಿಕ್ಕಿರಿದ ಲಸಿಕೆ ಶಿಬಿರದಲ್ಲಿ 19 ವರ್ಷದ ದಿನಗೂಲಿ ಕೆಲಸಗಾರನಿಗೆ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ.
ಒಟ್ಟಿಗೆ ಎರಡು ಡೋಸ್ ಲಸಿಕೆ ಪಡೆದ ಯುವಕನನ್ನು ಆರೋಗ್ಯ ಕೇಂದ್ರದಲ್ಲಿ ಮೂರು ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಯಿತು. ನಂತರ ಮನೆಗೆ ಕಳುಹಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಬುಧವಾರದಿಂದ ಯುವಕನ ಮನೆಯಲ್ಲಿಯೇ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಮತ್ತು ಗುರುವಾರ ತಡರಾತ್ರಿಯವರೆಗೆ ಯಾವುದೇ ಪ್ರತಿಕೂಲ ಪರಿಣಾಮ ವರದಿಯಾಗಿಲ್ಲ ಎಂದು ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ ಬಿ ನಂದಕುಮಾರ್ ಅವರು ತಿಳಿಸಿದ್ದಾರೆ.
ತಾಲ್ಲೂಕಿನ ಕೂಟೇಲು ಮೂಲದ ಕೆಬಿ ಅರುಣ್ ಎಂಬ ದಿನಗೂಲಿ ಕೆಲಸಗಾರ ಬುಧವಾರ ಸುಳ್ಯ ತಾಲೂಕಿನ ದುಗ್ಗಲಕಡ ಪ್ರೌಢ ಶಾಲೆಯಲ್ಲಿ ಲಸಿಕೆ ಶಿಬಿರಕ್ಕೆ ಹೋಗಿದ್ದರು. ಅಲ್ಲಿ ಆರೋಗ್ಯ ಸಹಾಯಕರು ಅವರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿದರು. ಸ್ವಲ್ಪ ಸಮಯ ಕೋಣೆಯಲ್ಲಿ ಕಾಯುತ್ತಿದ್ದ ಯುವಕನಿಗೆ ಈಗಾಗಲೇ ಲಸಿಕೆ ನೀಡಿದ್ದು ತಿಳಿಯದೆ ಅದೇ ಸಿಬ್ಬಂದಿ ಎರಡನೇ ಡೋಸ್ ನೀಡಿದ್ದಾರೆ.
Kshetra Samachara
03/09/2021 04:46 pm