ಮುಲ್ಕಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ "ಕಟೀಲು ಶಿವಳ್ಳಿ ಸ್ಪಂದನ" ವಿಪ್ರ ಸಂಘಟನೆಯಿಂದ ವಲಯದ ಆಯ್ದ ವಿಪ್ರ ಬಂಧುಗಳಿಗೆ "ಜನ್ಮಾಷ್ಟಮಿ ಕಿಟ್" ವಿತರಣೆ ಮಾಡಲಾಯಿತು.
ದಾನಿ ಶಿಬರೂರು ಬಾಲಕೃಷ್ಣ ಶಿಬರಾಯ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ದಾನಿಗಳ ನೆರವಿನಿಂದ ಆಯ್ದ ಕುಟುಂಬಗಳಿಗೆ ನೆರವನ್ನು ಒದಗಿಸಲಾಗಿದ್ದು ಸಂಘಟನೆಯ ಒಗ್ಗಟ್ಟಿಗೆ ಶ್ರಮಿಸಿ ಎಂದರು.
ಈ ಸಂದರ್ಭ ದಾನಿಗಳಾದ ವೇದವ್ಯಾಸ ಉಡುಪ, ಪೇಜಾವರ ಶ್ರೀಧರ ರಾವ್ ಕೊಡೆತ್ತೂರು, ಮಾಧವ ಭಟ್ ಕುಲ್ಲಂಗಾಲು, ಗೋಪಾಲಕೃಷ್ಣ ಉಡುಪ ಕಿಲೆಂಜೂರು ರವರನ್ನು ಅಭಿನಂದಿಸಲಾಯಿತು. ವಲಯದ ಅಧ್ಯಕ್ಷ ಅನಂತಪದ್ಮನಾಭ ಆಚಾರ್ಯ ಶಿಬರೂರು, ಪದಾಧಿಕಾರಿಗಳಾದ ರಮೇಶ್ ಭಟ್ ಕಿನ್ನಿಗೋಳಿ, ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು, ಸುರೇಶ್ ಭಟ್ ಅತ್ತೂರು ಉಪಸ್ಥಿತರಿದ್ದರು.
Kshetra Samachara
25/08/2021 07:49 am