ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೂರನೇ ಅಲೆ ಹಿನ್ನೆಲೆ: ಜಿಲ್ಲೆಯ 2 ಲಕ್ಷ 40 ಸಾವಿರ ಮಕ್ಕಳ ಆರೋಗ್ಯ ತಪಾಸಣೆ : ಡಿ.ಸಿ. ಜಿ. ಜಗದೀಶ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋರೋನಾ ಸಂಕ್ರಾಮಿಕ ಹಾವಳಿ ಹೆಚ್ಚುತ್ತಿದ್ದು ,ಪ್ರತಿದಿನ ನೂರರ ಆಸುಪಾಸಿನಲ್ಲಿ ಪಾಸಿಟಿವ್ ಕೇಸುಗಳು ಬರುತ್ತಿವೆ.ಇವತ್ತು ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ ,ಮೂರನೇ ಅಲೆ ತಡೆಗಟ್ಟಲು ಸಿದ್ಧತೆ ಮಾಡಿಕೊಂಡಿದ್ದೇವೆ.

ಜಿಲ್ಲೆಯಾದ್ಯಂತ ವಾತ್ಸಲ್ಯ ಮಕ್ಕಳ ತಪಾಸಣೆ ಕಾರ್ಯಕ್ರಮ ನಡೆಯುತ್ತಿದೆ.ಉಡುಪಿ ಜಿಲ್ಲೆಯ 2 ಲಕ್ಷ 40 ಸಾವಿರ ಮಕ್ಕಳ ತಪಾಸಣೆ ನಡೆಯುತ್ತಿದೆ.ಅಪೌಷ್ಠಿಕ ಮಕ್ಕಳಿಗೆ ಫುಡ್ ಕಿಟ್ ವಿತರಣೆ ಮಾಡುತ್ತಿದ್ದೇವೆ.ಮಕ್ಕಳ ,ತಜ್ಞರ ಸಭೆ ಮಾಡಿದ್ದೇವೆ.ಜಿಲ್ಲೆಯಲ್ಲಿ 50 ಐಸಿಯು ಬೆಡ್ ಹೆಚ್ಚಿಸಲು ನಿರ್ಮಿತಿ ಕೇಂದ್ರಕ್ಕೆ ಆದೇಶ ಮಾಡಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ನಾಲ್ಕು ಹೊಸ ಆಕ್ಸಿಜನ್ ಪ್ಲಾಂಟ್ ತಿಂಗಳಾಂತ್ಯಕ್ಕೆ ಸಿದ್ದವಾಗುತ್ತದೆ.ಮಕ್ಕಳಿಗಾಗಿ ಪೀಡಿಯಾಟ್ರಿಕ್ ವೆಂಟಿಲೇಟರ್ ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

10/08/2021 02:00 pm

Cinque Terre

18.54 K

Cinque Terre

5

ಸಂಬಂಧಿತ ಸುದ್ದಿ