ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಮಾಸ್ಕ್ ಹಾಕಲ್ಲ: ಅಂಗಡಿ‌ ಮಾಲೀಕನಿಂದ ಅಧಿಕಾರಿಗೇ ಆವಾಜ್ !

ಕಾರ್ಕಳ: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ,ಕಂದಾಯ ಇಲಾಖೆ ಮತ್ತು ಸ್ಥಳೀಯಾಡಳಿತ ಕೋವಿಡ್ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿಯಮ ಬಿಗಿಗೊಳಿಸಿದೆ.ಇದರ ಭಾಗವಾಗಿ ಕಾರ್ಕಳದ ಅಂಗಡಿ ಮುಂಗಟ್ಟುಗಳು ,ಬಟ್ಟೆಮಳಿಗೆಗಳಿಗೆ ದಿಢೀರ್ ಭೇಟಿ ನೀಡಿದ ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ಮತ್ತು ತಹಶೀಲ್ದಾರ್ ಅವರ ತಂಡ ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡಿತು.ಮಾಸ್ಕ್ ಹಾಕದವರಿಗೆ ಸ್ಥಳದಲ್ಲೇ ದಂಡ ವಿಧಿಸಿದರು.ಈ ವೇಳೆ ಅಂಗಡಿ ಮಾಲೀಕರೊಬ್ಬರು ಅಂಗಡಿಯೊಳಗೆ ಮಾಸ್ಕ್ ಹಾಕುವ ಅಗತ್ಯ ಏನಿದೆ ,ಒಳಗೆ ಮಾಸ್ಕ್ ಹಾಕಿದ್ರೆ ಉಸಿರುಗಟ್ಟುತ್ತದೆ ,ನಾನು ಮಾಸ್ಕ್ ಹಾಕುವುದಿಲ್ಲ ಎಂದು ಅಧಿಕಾರಿಗಳಿಗೇ ಆವಾಜ್ ಹಾಕಿದ ಪ್ರಸಂಗ ನಡೆಯಿತು.

ಈ ವೇಳೆ ಅಂಗಡಿ‌ ಮಾಲಿಕರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು ,ಮಾಸ್ಕ್ ಹಾಕದಿದ್ದರೆ ದಂಡ ಕಟ್ಟಬೇಕು ,ತಪ್ಪಿದರೆ ಅಂಗಡಿಯ ಪರವಾನಗಿ ರದ್ದು ಮಾಡುತ್ತೇವೆ ಎಂದು ಎಚ್ಚರಿಸಿದ ಘಟನೆ ನಡೆಯಿತು.ಮುಂದಿನ ದಿನಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡದವರ ವಿರುದ್ಧ ದಂಡ ಪ್ರಯೋಗ ತೀವ್ರಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

06/08/2021 10:37 am

Cinque Terre

17.32 K

Cinque Terre

5

ಸಂಬಂಧಿತ ಸುದ್ದಿ