ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊರೋನಾ ಹೆಚ್ಚಳ ಹಿನ್ನೆಲೆ: ಸಿಎಂ ಜೊತೆ ಇಂದು ಉಡುಪಿ ಡಿಸಿ ವಿಡಿಯೊ ಕಾನ್ಫರೆನ್ಸ್

ಉಡುಪಿ : ಜಿಲ್ಲೆಯಲ್ಲಿ ಕೊರೋನಾ ಸಾಂಕ್ರಾಮಿಕ ಹೆಚ್ಚಳ ಹಿನ್ನೆಲೆಯಲ್ಲಿ ಇವತ್ತು ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಉಡುಪಿ ಡಿಸಿ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.ಇಂದು ಸಂಜೆ 5.30 ಕ್ಕೆ ವಿಡಿಯೋ ಕಾನ್ಫರೆನ್ಸ್ ನಿಗದಿಪಡಿಸಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಉಡುಪಿ ಡಿ.ಸಿ ಜಿ.ಜಗದೀಶ್,ಉಡುಪಿ ಜಿಲ್ಲೆಯಲ್ಲಿ ಪ್ರತಿದಿನ ಮೂರುವರೆ ಸಾವಿರ ಕೊರೋನಾ ಟೆಸ್ಟ್ ಮಾಡುತ್ತೇವೆ.ಜಿಲ್ಲೆಯಲ್ಲಿ ಕೆಲವು ಕಡೆ ಮಾಸ್ಕ್ ಗಳು ಮಾಯವಾಗಿವೆ.ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ದೇವಸ್ಥಾನಗಳಲ್ಲಿ ಜನ ಸಾಮಾಜಿಕ ಅಂತರವನ್ನು ಮರೆತಿದ್ದಾರೆ.ಪ್ರಾಥಮಿಕ ಸಂಪರ್ಕದಿಂದ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ ಎಂದ ಅವರು,ಹೋಮ್ ಐಸೋಲೇಶನ್ ಗೆ ಅವಕಾಶ ಕೊಡಬಾರದು.ಅಧಿಕಾರಿಗಳು- ತಜ್ಞರು, ವೈದ್ಯರು ಸಭೆ ನಡೆಸಿ ತೀರ್ಮಾನಿಸಿದ್ದೇವೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಲ್ಲಿ ನಾನು ಇದನ್ನೇ ವಿನಂತಿ ಮಾಡುತ್ತೇನೆ.

ಕೋವಿಡ್ ಕೇರ್ ಸೆಂಟರ್ ನಲ್ಲಿ ಪಾಸಿಟಿವ್ ಕೇಸ್ ಗಳಿಗೆ ಚಿಕಿತ್ಸೆ ಸಿಗಬೇಕು.ಜಿಲ್ಲಾ ಗಡಿಯಲ್ಲಿ ಚೆಕ್ ಪೋಸ್ಟ್ ರಚನೆ ಮಾಡಲಾಗಿದೆ.

ಟೆಸ್ಟ್ ರಿಪೋರ್ಟ್ ಇಲ್ಲದೆ ಬರುವವರನ್ನು ತಡೆಯುತ್ತೇವೆ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

31/07/2021 11:57 am

Cinque Terre

15.66 K

Cinque Terre

1

ಸಂಬಂಧಿತ ಸುದ್ದಿ