ಕಿನ್ನಿಗೋಳಿ:ಕೋವಿಡ್ ತಡೆಗಟ್ಟಲು ಸಾರ್ವಜನಿಕರು ಸಹಕರಿಸಿ : ಸಾಯಿಶ್ ಚೌಟ

ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕಿನ್ನಿಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ಹರಿಹರ ಶ್ರೀ ರಾಮ ಭಜನಾ ಮಂದಿರ ಮತ್ತು ಕೋರ್ದಬ್ಬು ದೈವಸ್ಥಾನ ಹಾಗೂ ಕಿನ್ನಿಗೋಳಿ ಗೋಳಿಜೋರ ಶ್ರೀರಾಮ ಯುವಕ ವೃಂದ ರಿ ಜಂಟಿ ಆಶ್ರಯದಲ್ಲಿ ಉಚಿತ . ಕೋವಿಡ್ ಲಸಿಕ ಶಿಬಿರ ಗೋಳಿಜೋರ ಹರಿಹರ ಶ್ರೀರಾಮ ಭಜನಾ ಮಂದಿರದ ಆವರಣದಲ್ಲಿ ನಡೆಯಿತು

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯಿಶ್ ಚೌಟ ರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಸರಕಾರದ ನಿರ್ದೇಶನವನ್ನು ಪಾಲಿಸಿ ಕೋವಿಡ್ ತಡೆಗಟ್ಟುವಲ್ಲಿ ಸಾರ್ವಜನಿಕರು ಸಹಕರಿಸಿ ಎಂದರು.

ವೇದಿಕೆಯಲ್ಲಿ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಚಿತ್ರ, ಶಿಕ್ಷಕ ಶಂಕರ್ ಮಾಸ್ಟರ್ ಗೋಳಿಜೋರ, ಕಿನ್ನಿಗೋಳಿ ಗ್ರಾ ಪಂ.ಮಾಜೀ ಸದಸ್ಯ ಚಂದ್ರಶೇಖರ ಗೋಳಿಜೋರ ಚೇತನ್ , ಉಮೇಶ್ ಎಂ , ನರ್ಸಪ್ಪ,ಶ್ರೀರಾಮ ಯುವಕ ವೃಂದದ ಅಧ್ಯಕ್ಷ ಪ್ರಕಾಶ್ ಕಿನ್ನಿಗೊಳಿ ಆರೋಗ್ಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Kshetra Samachara

Kshetra Samachara

2 months ago

Cinque Terre

4.29 K

Cinque Terre

0