ಉಡುಪಿ: ಕೊನೆಗೂ ಬಂತು ಆಕ್ಸಿಜನ್ !; ಬಳ್ಳಾರಿಯಿಂದ ಸರಬರಾಜು

ಉಡುಪಿ: ಕೊರೊನಾ 2ನೇ ಅಲೆ ಅಬ್ಬರ ಜನ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿದೆ. ಸದ್ಯ ಎಲ್ಲ‌ ಕಡೆ ಆಕ್ಸಿಜನ್ ಕೊರತೆ ಆತಂಕ ಆವರಿಸಿದೆ. ಸೋಮವಾರ ಉಡುಪಿ ಜಿಲ್ಲೆಯಲ್ಲಿ ಆಕ್ಸಿಜನ್ ಪೂರೈಕೆ ಕಡಿಮೆಯಿತ್ತು. ಕೇವಲ ಮಂಗಳವಾರ ಸಂಜೆವರೆಗೆ ಬೇಕಾದಷ್ಟು ಮಾತ್ರ ಆಕ್ಸಿಜನ್ ಸ್ಟಾಕ್ ಇತ್ತು.

ಈ ಮಧ್ಯೆ ಇಂದು ಉಡುಪಿ ಜಿಲ್ಲಾಸ್ಪತ್ರೆಗೆ ಬಳ್ಳಾರಿಯಿಂದ 4 ಟನ್ ಆಕ್ಸಿಜನ್ ಸರಬರಾಜು ಆಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ 20 ಸಾವಿರ ಕೆಎಲ್ ದಾಸ್ತಾನು ಸಾಮರ್ಥ್ಯ ಹೊಂದಿರುವ ಟ್ಯಾಂಕ್ ಇದ್ದು ಸದ್ಯ 9 ಟನ್ ಆಕ್ಸಿಜನ್ ಸ್ಟಾಕ್ ಇದೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ‌ 6 ಟನ್ ದಾಸ್ತಾನು ಸಾಮರ್ಥ್ಯ ಟ್ಯಾಂಕ್ ಇದ್ದು ಇಂದು 4 ಟನ್ ಆಕ್ಸಿಜನ್ ಫಿಲ್ ಮಾಡಲಾಗಿದೆ.

ಉಳಿದಂತೆ ಜಿಲ್ಲೆಯ ಉಳಿದ ಆಸ್ಪತ್ರೆಗಳಿಗೆ 550 ಜಂಬೋ ಸಿಲಿಂಡರ್ ಗಳ ಪೂರೈಕೆಯಾಗಿದೆ. ಸದ್ಯ ಮೂರು ದಿನಗಳಿಗೆ ಸಾಕಾಗುವಷ್ಟು ಆಕ್ಸಿಜನ್ ಸ್ಟಾಕ್ ಇದ್ದು ಕೊರೊನಾ ಪ್ರಕರಣ ಹೆಚ್ಚಾದರೆ, ನಾಳೆಯಿಂದ ಆಕ್ಸಿಜನ್ ಪೂರೈಕೆ ವ್ಯತ್ಯಯವಾದರೆ ಜಿಲ್ಲೆಗೂ ಆಕ್ಸಿಜನ್ ಸಮಸ್ಯೆ ಎದುರಾಗಲಿದೆ.

Kshetra Samachara

Kshetra Samachara

6 days ago

Cinque Terre

16.25 K

Cinque Terre

1

  • Sukumara P.
    Sukumara P.

    ಆಕ್ಸಿಜನ್ ಗೆ ಕಾವಲು ಕಾಯುವ ಪರಿಸ್ಥಿತಿ ಇದೆ!