ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ:ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ

ಮುಲ್ಕಿ: ಭಾರತ ಸರಕಾರ ನೆಹರೂ ಯುವ ಕೇಂದ್ರ ಮಂಗಳೂರು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮತ್ತು ಮಹಿಳಾ ಮಂಡಲ(ರಿ) ಹಳೆಯಂಗಡಿ, ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಹಳೆಯಂಗಡಿ ಜಂಟಿ ಆಶ್ರಯದಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ಯುವತಿ ಮತ್ತು ಮಹಿಳಾ ಮಂಡಲದ ಸಭಾಂಗಣದಲ್ಲಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾ, ವಿನಾಯಕ ರಜತ ಸೇವಾ ಟ್ರಸ್ಟ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಸಹಕಾರದೊಂದಿಗೆ ನಡೆಯಿತು. ಕಾರ್ಯಕ್ರಮವನ್ನು ಯಾದವ ದೇವಾಡಿಗ ಉದ್ಘಾಟಿಸಿ ಮಾತನಾಡಿ ದೈನಂದಿನ ಬದುಕಿನಲ್ಲಿ ಆಚಾರ-ವಿಚಾರಗಳಿಗೆ ಗಮನಕೊಟ್ಟು ಧನಾತ್ಮಕ ಚಿಂತನೆ ಗಳಿಗೆ ಹೆಚ್ಚಿನ ಮಹತ್ವ ನೀಡುವುದು ದೇಹ ರಕ್ಷಣೆಗೆ ಮಾಡಬಹುದಾದ ಪ್ರಮುಖ ಅಂಶ ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ವೈದ್ಯರಾದ ಡಾ.ನಂದಿನಿ ಮಾತನಾಡಿ ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರು ಎಚ್ಚರಿಕೆವಹಿಸಿ ಅಂಜಿಕೆ ಮುಜುಗರ ಬಿಟ್ಟು ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಲಯನ್ ಮಾಜೀ ವಲಯಾಧ್ಯಕ್ಷ ಮೋಹನ್ ಸುವರ್ಣ, ಲಿಯೋ ಕ್ಲಬ್ ಅಧ್ಯಕ್ಷ ಚಿರಾಗ್ ಡಿ.ಕೋಟ್ಯಾನ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಶ್ಮಿ, ಯುವಕ ಮಂಡಲದ ಅಧ್ಯಕ್ಷ ಯತೀಶ್ ಕೋಟ್ಯಾನ್ ,ಮಹಿಳಾ ಮಂಡಲದ ಅಧ್ಯಕ್ಷೆ ರೇಷ್ಮಾ,ಯುವತಿ ಮಂಡಲದ ಅಧ್ಯಕ್ಷ ದಿವ್ಯಶ್ರೀ, ಕಾರ್ಯದರ್ಶಿ ಪ್ರೇಮಲತಾ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

06/12/2020 10:48 pm

Cinque Terre

9.08 K

Cinque Terre

0

ಸಂಬಂಧಿತ ಸುದ್ದಿ