ಮುಲ್ಕಿ: ಕಾರ್ನಾಡು ಶ್ರೀ ರಾಮ ಸೇವಾ ಮಂಡಳಿ ವತಿಯಿಂದ ಮುಲ್ಕಿಯ ಬಪ್ಪನಾಡು ಶ್ರೀ ಅನ್ನಪೂರ್ಣ ಸಭಾಂಗಣದ ಹಿಂಭಾಗದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂದರ್ಭ ಸೇವಾ ಮಂಡಳಿ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಮಾತನಾಡಿ, ಸ್ವಚ್ಛತೆಯಿಂದ ಕೊರೊನಾ ನಿರ್ಮೂಲನೆ ಸಾಧ್ಯವಿದ್ದು, ನಾಗರಿಕರು ಪರಿಸರವನ್ನು ಸ್ವಚ್ಛವಾಗಿ ರಿಸಲು ಸಂಘಟನೆಗಳ ಜೊತೆಗೆ ಕೈಜೋಡಿಸಲು ಮನವಿ ಮಾಡಿದರು.
ತಮ್ಮ ಸಂಘಟನೆಯಿಂದ ಇನ್ನಷ್ಟು ಒಳ್ಳೆಯ ಕೆಲಸ ಕಾರ್ಯ ನಡೆಯಲಿವೆ ಎಂದರು.
ಶ್ರಮದಾನದಲ್ಲಿ ಸಂಘಟನೆಯ ಇತರ ಸದಸ್ಯರು ಭಾಗವಹಿಸಿದರು.
Kshetra Samachara
06/12/2020 05:18 pm