ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಫಲಾನುಭವಿಗಳಿಗೆ ವೈದ್ಯಕೀಯ ಚಿಕಿತ್ಸೆಗಿರುವ ಇಎಸ್ ಐ ಸೌಲಭ್ಯವನ್ನು ನ.1 ರಿಂದ ನಿಲ್ಲಿಸಲಾಗಿದೆ. ಇದರಿಂದ ಬಡ ಕಾರ್ಮಿಕರಿಗೆ ತೊಂದರೆಯಾಗಿದ್ದು, ತಕ್ಷಣ ವೈದ್ಯಕೀಯ ಚಿಕಿತ್ಸೆಗೆ ಇರುವ ಇಎಸ್ ಐ ಪ್ರಾರಂಭಿಸಬೇಕು ಎಂದು ಮಾಸ್ ಇಂಡಿಯಾ ಆಗ್ರಹಿಸಿದೆ.
ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಸ್ ಇಂಡಿಯಾ ಉಪಾಧ್ಯಕ್ಷ ಗೋಪಾಲ ಕೋಟೆಯಾರ್ ಮಾತನಾಡಿ, ಕೆಎಂಸಿ ಆಸ್ಪತ್ರೆ ಎಲ್ಲ ರೀತಿ ಸೌಲಭ್ಯ ಹೊಂದಿರುವ ಸುಸಜ್ಜಿತ ಆಸ್ಪತ್ರೆ. ಆದರೆ, ಇಎಸ್ ಐ ಪ್ರಾಧಿಕಾರ ಕೆಎಂಸಿಗೆ ನೀಡಬೇಕಾದ ಸುಮಾರು15 ಕೋಟಿ ರೂ. ಬಾಕಿ ಉಳಿಸಿದೆ. ಈ ಕಾರಣಕ್ಕಾಗಿ ಆಸ್ಪತ್ರೆ ಈ ಸೌಲಭ್ಯವನ್ನು ನ.1ರಿಂದ ನಿಲ್ಲಿಸಿದೆ. ಈ ಬಗ್ಗೆ ಮಾಸ್ ಇಂಡಿಯಾ ಪ್ರಧಾನಿಗೆ, ಮುಖ್ಯಮಂತ್ರಿಗೆ ಮತ್ತು ಸ್ಥಳೀಯ ಡಿ.ಸಿ.ಗಳಿಗೆ ಪತ್ರ ಕಳುಹಿಸಿದೆ. ಆದರೆ, ಪತ್ರಕ್ಕೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗೋಪಾಲ್ ಕೋಟೆಯಾರ್ ಹೇಳಿದರು.
ಉಡುಪಿ ಜಿಲ್ಲೆಯಲ್ಲಿ 25 ಸಾವಿರಕ್ಕೂ ಮಿಕ್ಕಿ ಕಾರ್ಮಿಕರಿದ್ದಾರೆ. ಇವರೆಲ್ಲ ಇಎಸ್ ಐ ವಿಮಾ ಯೋಜನೆ ಸದಸ್ಯರಾಗಿದ್ದಾರೆ. ಆದರೆ, ಕಾರ್ಮಿಕರಿಗೆ ತಮ್ಮ ದುಡ್ಡಿನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಇದೀಗ ಸಾಧ್ಯವಾಗುತ್ತಿಲ್ಲ. ಸರಕಾರ ತಕ್ಷಣ ಕ್ರಮ ಕೈಗೊಂಡು ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
02/12/2020 01:03 pm