ಬಂಟ್ವಾಳ: ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಅಂತಾರಾಷ್ಟ್ರೀ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ ೩೧೭ಡಿ ಪ್ರಾಂತ್ಯ-೨ರ ಪ್ರಾಂತೀಯ ಸಮ್ಮೇಳನ ಪುನರ್ಜನ್ಮ ನೆನಪಿಗಾಗಿ ನೀಡಲಾದ ಶೈತ್ಯಾಗಾರವನ್ನು ಆಸ್ಪತ್ರೆಯ ಆವರಣದಲ್ಲಿ ಸಮರ್ಪಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಈ ಸಂದರ್ಭ ಮಾತನಾಡಿ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಜತೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯಗಳಿಗೆ ಸ್ಪಂದನೆ ನೀಡುವ ಕಾರ್ಯ ಮಾಡಲಾಗುತ್ತಿದೆ. ಇಲ್ಲಿ ಎಲ್ಲಾ ವೈದ್ಯರ ಸೇವೆ ಲಭ್ಯವಿದ್ದು, ರೋಗಿಗಳಿಗೆ ಉತ್ತಮ ಸೇವೆ ಲಭ್ಯವಾಗುತ್ತಿದೆ. ಶೀಘ್ರದಲ್ಲಿ ಐಸಿಯು ಬೆಡ್ಗಳ ವ್ಯವಸ್ಥೆಯನ್ನೂ ಒದಗಿಸಲಾಗುತ್ತದೆ ಎಂದರು. ಪ್ರಾಂತ್ಯ-2ರ ಪ್ರಾಂತೀಯ ಅಧ್ಯಕ್ಷ ಸಂಜೀವ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಪ್ರಕಾಶ್, ಮಾಜಿ ಗವರ್ನರ್ ಹರಿಕೃಷ್ಣ ಪುನರೂರು, ಪ್ರಥಮ ಉಪಗವರ್ನರ್ ವಸಂತಕುಮಾರ್ ಶೆಟ್ಟಿ, ದ್ವಿತೀಯ ಉಪಗವರ್ನರ್ ಎಸ್.ಸಂಜೀತ್ ಶೆಟ್ಟಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಕೃಷ್ಣಶ್ಯಾಮ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಷ್ಪಲತಾ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಎನ್.ಸತೀಶ್ ಕುಡ್ವ, ಕಾರ್ಯದರ್ಶಿ ಮಧ್ವರಾಜ್ ಬಿ.ಕಲ್ಮಾಡಿ, ಸಲಹೆಗಾರ ರಾಧಾಕೃಷ್ಣ, ವಲಯಾಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಮನೋರಂಜನ್ ಕೆ.ಆರ್, ಪ್ರಮುಖರಾದ ಶಿವಾನಂದ ಬಾಳಿಗಾ, ಉಮೇಶ್ ಆಚಾರ್, ಸುನೀಲ್ ಬಿ, ಕೆ.ವೈಕುಂಠ ಕುಡ್ವ, ಜಯಂತ್ ಶೆಟ್ಟಿ, ಮಂಗೇಶ್ ಭಟ್ ವಿಟ್ಲ, ದಿಶಾ ಆಶೀರ್ವಾದ್, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ತಾಲೂಕು ಅಧ್ಯಕ್ಷ ಬೇಬಿ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
29/11/2020 07:02 pm