ಉಡುಪಿ:ಕರೋನ ಮಹಾಮಾರಿಯಿಂದ ಇಡೀ ವಿಶ್ವವೇ ನಲುಗಿಹೋಗಿದೆ. ಆದರೆ ಇದೀಗ ಕಳೆದ ಹಲವು ತಿಂಗಳುಗಳಿಂದ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿತ್ತು. ಆದರೆ ಇದೀಗ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣಕ್ಕೆ ಬಂದಿದೆ. ಮೊದಲು 100 ಜನರನ್ನು ಟೆಸ್ಟ್ ಮಾಡಿದರೆ ಸಾಕಷ್ಟು ಪ್ರಕರಣಗಳು ಬರುತ್ತಿತ್ತು. ಆದರೆ ಇದೀಗ ನೂರು ಜನರನ್ನು ಟೆಸ್ಟ್ ಮಾಡಿದರೆ ಕೇವಲ ಒಂದು ಎರಡು ಪ್ರಕರಣಗಳು ಸಿಗುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾಡಳಿತದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಬೆಂಬಲ ಇದಕ್ಕೆ ಮುಖ್ಯ ಕಾರಣ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
Kshetra Samachara
06/11/2020 11:49 am