ಕುಂದಾಪುರ: ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ.ತಾಲೂಕಿನ ಕೆರಾಡಿ ಗ್ರಾಮದ ದೀಟಿಯಲ್ಲಿ ಗದ್ದೆ ಉಳುತ್ತಿದ್ದಾಗಲೇ ವ್ಯಕ್ತಿಯೊಬ್ವರು ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.ಸುರಿಯುವ ಮಳೆಯಲ್ಲೇ ಈ ದುರ್ಘಟನೆ ಸಂಭವಿಸಿದೆ.
ದೀಟಿ ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ರಾಜು ಎಂಬವರು ಉಳುತ್ತಿದ್ದರು.ಈ ಸಂದರ್ಭ ರಾಜು ಅವರಿಗೆಹೃದಯಾಘಾತವಾಗಿದೆ.ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಯಾರೂ ಇಲ್ಲದ ಕಾರಣ ,ಅವರು ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದಿದ್ದಾರೆ.
ಕೆಲ ಹೊತ್ತಿನ ಬಳಿಕ ಸ್ಥಳೀಯರು ಬಂದು ನೋಡಿದಾಗ ರಾಜು ಗದ್ದೆಯಲ್ಲಿ ಬಿದ್ದಿದ್ದರು.ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಾಜು ಇಹಲೋಕ ತ್ಯಜಿಸಿದ್ದರು. ಹರಿಹರ ಮೂಲದ ರಾಜು, ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು.
PublicNext
30/06/2022 01:45 pm