ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಉಡುಪಿಯ ಮಿಷನ್ ಆಸ್ಪತ್ರೆಗೆ ಬಡಗಬೆಟ್ಟು ಕ್ರೆಡಿಟ್ ಕೋಪರೇಟಿವ್ ಸೊಸೈಟಿಯಿಂದ ವೆಂಟಿಲೇಟರ್ ಕೊಡುಗೆ

ಉಡುಪಿ: ಉಡುಪಿಯ ಪ್ರಸಿದ್ದ ಆಸ್ಪತ್ರೆಯಾದ ಮಿಷನ್ ಆಸ್ಪತ್ರೆಯಲ್ಲಿ ಕೊವಿಡ್- ನಾನ್ ಕೊವಿಡ್ ಐಸಿಯು ಕೇರ್ ಯುನಿಟ್ ಸ್ಥಾಪಿಸಲಾಗಿದ್ದು ಇದರ ಉದ್ಘಾಟನಾ ಸಮಾರಂಭ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೊಪರೇಟಿವ್ ಸೊಸೈಟಿ ಕೊಡಮಾಡಿದ ವೆಂಟಿಲೇಟರ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ವೆಂಟಿಲೇಟರ್ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಆಸ್ಪತ್ರೆಯ ಕೋರಿಕೆಯ ಮೇರೆಗೆ ಸುಮಾರು

೬ ಲಕ್ಷ ಮೌಲ್ಯದ ವೆಂಟಿಲೇಟರನ್ನು ಬಡಗಬೆಟ್ಟು ಕ್ರೆಡಿಟ್ ಕೊಪ್ರೇಟಿವ್ ಸೊಸೈಟಿ ನೀಡಿದ್ದು ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ವೆಂಟಿಲೇಟರ್ ಅಳವಡಿಸಿದ ಯುನಿಟನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ರಿಬ್ಬರ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಅಲ್ಲದೇ ಆಸ್ಪತ್ರೆಯಲ್ಲಿ ಕೊವಿಡ್ ಮತ್ತು ನಾನ್ ಕೋವಿಡ್ ಐಸಿಯು ಕೇರ್ ಯುನಿಟ್ ಸ್ಥಾಪಿಸಲಾಗಿದ್ದು ಇದರ ಉದ್ಘಾಟನೆಯನ್ನ ಬಡಗಬೆಟ್ಟು ಕ್ರೆಡಿಟ್ ಕೊಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ನೆರವೇರಿಸಿದರು.

Edited By : Manjunath H D
Kshetra Samachara

Kshetra Samachara

19/10/2020 05:20 pm

Cinque Terre

11.98 K

Cinque Terre

0

ಸಂಬಂಧಿತ ಸುದ್ದಿ