ಮಂಗಳೂರು: ಭಾರತೀಯ ಅಂಚೆ ಇಲಾಖೆಯು ಭಾರತಾದ್ಯಂತ ತನ್ನದೇ ಅಖಿಲ ಭಾರತ ರಸ್ತೆ ಸಾರಿಗೆ ವ್ಯವಸ್ಥೆಯತ್ತ ದಾಪುಗಾಲಿಡುತ್ತಿದೆ. ಈ ನಿಟ್ಟಿನಲ್ಲಿ ನಿನ್ನೆ ರಾತ್ರಿಯಿಂದ ಪ್ರತಿದಿನ ಮಂಗಳೂರು ಅಂಚೆ ಕೇಂದ್ರದಿಂದ ಕಣ್ಣೂರು, ಕಲ್ಲಿಕೋಟೆ, ತ್ರಿಶ್ಶೂರ್,ಕೊಚ್ಚಿ ಮಾರ್ಗವಾಗಿ ತಿರುವನಂತಪುರಂಗೆ ಪಾರ್ಸೆಲ್ ರವಾನೆ ಮಾಡಲು ಅಂಚೆ ಪಾರ್ಸೆಲ್ ವಾಹನದ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭ ತಿರುವನಂತಪುರದಲ್ಲೂ ಮಂಗಳೂರು ಕಡೆಗೆ ಹೊರಡುವ ವಾಹನಕ್ಕೆ ಚಾಲನೆ ನೀಡಲಾಗಿದೆ. ಮಂಗಳೂರು ಅಂಚೆ ಕೇಂದ್ರದಿಂದ ವಾಹನದ ಮೂಲಕ ಕೇರಳದ ವಿವಿಧ ಭಾಗಗಳಿಗೆ ಮಂಗಳೂರು, ಪುತ್ತೂರು, ಉಡುಪಿಯಿಂದ ಕಳುಹಿಸಲ್ಪಡುವ ಪಾರ್ಸೆಲ್ ಗಳ ತ್ವರಿತ ಸಾಗಾಟ ಮತ್ತು ಡೆಲಿವರಿ ಸಾಧ್ಯವಾಗಲಿದೆ. ಅದೇ ರೀತಿ ಕೇರಳದ ಯಾವುದೇ ಊರಿನಿಂದ ಮಂಗಳೂರಿಗೆ ಕಳುಹಿಸಲ್ಪಡುವ ಪಾರ್ಸೆಲ್ ಗಳೂ ಕ್ಲಪ್ತ ಸಮಯದಲ್ಲಿ ತಲುಪಲಿವೆ.
PublicNext
13/10/2022 04:44 pm